ಚಿಕ್ಕೋಡಿ : ಅಥಣಿ ಬಿಜೆಪಿ ಭದ್ರಕೋಟೆ ಭೇದಿಸಲು ಮತ್ತು ನನ್ನ ಗೆಲುವಿಗೆ ಕಾರಣವಾಗಿದ್ದ ರಮೇಶ್ ಜಾರಕಿಹೋಳಿ ನಮ್ಮ ನಾಯಕರು ಎಂದು ಹೇಳಿಕೆ ನೀಡಿ ಮುಂಬೈ ರೆಸಾರ್ಟ್ ರಾಜಕಾರಣ ಮಾಡಿದ್ದ ಮಹೇಶ್ ಕುಮಟಳ್ಳಿ ಈಗ ವರಸೆ ಬದಲಿಸಿದ್ದಾರೆ.
ಕಾರ್ಯನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದೇನೆ, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ನಾನು ನಮ್ಮ ಕ್ಷೇತ್ರಕ್ಕಾಗಿ ದುಡಿಯಲು ಶ್ರಮಿಸುತ್ತಿದ್ದೇನೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ ಎಂದು ಕುಮಟಳ್ಳಿ ಸ್ಪಷ್ಟನೆ ನೀಡಿದ್ದಾರೆ.