ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಐತಿಹಾಸಿಕ ನರಸಿಂಹ ದೇವಸ್ಥಾನದಲ್ಲಿ ಹಗಲೊತ್ತಲ್ಲೇ ದೇವರ ಹುಂಡಿ ಒಡೆದು ಕಳ್ಳತನ ಮಾಡಲಾಗಿದೆ.
ಬೆಳಗಾವಿ ಐತಿಹಾಸಿಕ ದೇವಾಲಯದಲ್ಲಿ ಕಳ್ಳತನ: ಪುರಾತತ್ವ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಐತಿಹಾಸಿಕ ನರಸಿಂಹ ದೇವಸ್ಥಾನದಲ್ಲಿ ಹಗಲೊತ್ತಲ್ಲೇ ದೇವರ ಹುಂಡಿಯನ್ನು ಒಡೆದು ಕಳ್ಳತನ ಮಾಡಲಾಗಿದ್ದು, ಇದಕ್ಕೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶಗೊಂಡ ಸ್ಥಳೀಯರು, ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ಕಳ್ಳತನಕ್ಕೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶಗೊಂಡ ಸ್ಥಳೀಯರು, ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ಬೆಳಗಿನ ಜಾವ ಯಾರೂ ಇಲ್ಲದಾಗ ಸಮಯ ಸಾಧಿಸಿರುವ ಖದೀಮರು, ಹುಂಡಿ ಒಡೆದು ಕಳ್ಳತನ ಮಾಡಿದ್ದಾರೆ. ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ದೇವರ ಹುಂಡಿ ಕಳ್ಳತನಕ್ಕೆ ಮುಖ್ಯ ಕಾರಣ. ಅಲ್ಲದೇ ಕದಂಬೋತ್ಸವ ಆಚರಿಸದ ಸರ್ಕಾರದ ಧೋರಣೆ ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಹಶಿಲ್ದಾರ್ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಬರುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
TAGGED:
Belgaum crime latest news