ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ - ಬೆಳಗಾವಿಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ

ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದಲ್ಲಿ ಮಂಗಳವಾರ ಸಂಜೆ ಜಡಿಶಂಕರಲಿಂಗ ದೇವರ ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ ಹೊತ್ತಿಕೊಂಡಿತು.

Temple Chariot Catches Fire
ಪಟಾಕಿ ಸಿಡಿದು ರಥಕ್ಕೆ ಬೆಂಕಿ

By

Published : Dec 29, 2021, 9:14 AM IST

ಬೆಳಗಾವಿ:ರಥೋತ್ಸವದ ವೇಳೆ ಪಟಾಕಿ ಸಿಡಿದು ರಥದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಡೆದಿದೆ.


ನಿನ್ನೆ (ಮಂಗಳವಾರ) ಶಿವಪೇಟೆ ಗ್ರಾಮದ ಜಡಿಶಂಕರಲಿಂಗ ದೇವರ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯ ಪ್ರಯುಕ್ತ ಜಡಿ ಶಂಕರಲಿಂಗ ದೇವರ 38ನೇ ಮಹಾರಥೋತ್ಸವವಿತ್ತು. ಈ ವೇಳೆ ಕೆಲ ಭಕ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ರಥಕ್ಕೆ ತಗುಲಿ, ರಥದ ಮೇಲ್ಭಾಗದಲ್ಲಿ ‌ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು.

ಇದನ್ನೂ ಓದಿ:ನೆಲಸಮವಾಯಿತು ಪುತ್ತೂರಿನ 156 ವರ್ಷಗಳ ಹಿಂದಿನ ಸರಕಾರಿ ಶಾಲೆ!

ABOUT THE AUTHOR

...view details