ಬೆಳಗಾವಿ:ಹೋಂ ಕ್ವಾರಂಟೈನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ.
ಹೋಂ ಕ್ವಾರಂಟೈನಲ್ಲಿರುವ ಹೊರಗೆ ಬರದಂತೆ ನೋಡಿಕೊಳ್ಳಿ: ಶಾಸಕ ಮಹಾಂತೇಶ ಕೌಜಲಗಿ ಸೂಚನೆ - Corona infection
ಹೋಂ ಕ್ವಾರಂಟೈನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳು, ಅಂಗಡಿ ವರ್ತಕರು, ವ್ಯಾಪಾರಸ್ಥರು ಹಾಗೂ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮೂವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಹೋಂ ಕ್ವಾರಂಟೈನ್ನಲ್ಲಿರುವವರು ಹೊರಗೆ ಬರದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಅವರು ಮನೆಯಿಂದ ಹೊರಗೆ ಬಂದ್ರೆ ಇಡೀ ಮನೆಯಲ್ಲಿನ ಎಲ್ಲರನ್ನೂ ಬೇರೆಡೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಸುತ್ತಮುತ್ತಲಿನ ಗ್ರಾಮದಲ್ಲಿನ ವ್ಯಾಪಾರಿಗಳು ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅಂಗಡಿಗಳನ್ನು ತೆರೆದು ವ್ಯವಹರಿಸಬೇಕು.ದಿನಸಿ ವಸ್ತುಗಳನ್ನು ನೀಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜತೆಗೆ ಹೆಚ್ಚಿನ ಬೆಲೆಗೆ ದಿನಸಿಗಳನ್ನು ಮಾರದಂತೆ ಎಚ್ಚರಿಕೆ ನೀಡಿದರು.