ಚಿಕ್ಕೋಡಿ:ಕೆಲ ದಿನಗಳ ಹಿಂದೆ ಸಂತೂಬಾಯಿ ಎಂಬ ಹೆಸರಿನ ದೇವಿ ಕಣ್ಣು ತೆರೆದಿದ್ದಾಳೆ ಎಂದು ಸುದ್ದಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಭಕ್ತರ ದಂಡು ದೇವಿಯ ದರ್ಶನಕ್ಕೆ ತಂಡೋಪತಂಡವಾಗಿ ಬರುತ್ತಿತ್ತು. ಈ ಕುರಿತ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕಾಗವಾಡ ತಹರಶೀಲ್ದಾರ್ ಪ್ರಮೀಳಾ ದೇಶಪಾಂಡೆ, ಪೂಜಾರಿಯ ನಾಟಕವನ್ನು ಬಯಲಿಗೆಳೆದು ತರಾಟೆಗೆ ತೆಗೆದುಕೊಂಡರು.
ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸಂತೂಬಾಯಿ ಎಂಬ ದೇವಿ ಕಣ್ಣು ಬಿಟ್ಟಿದ್ದಾಳೆ. ನಿಮ್ಮ ಆರೋಗ್ಯಕ್ಕೆ ದೇವಿಯ ದರ್ಶನ ಪಡೆದು ಪುನೀತರಾಗಿ ಎಂದು ಗುಲ್ ಎಬ್ಬಿಸಿ ಭಕ್ತರಿಂದ ಹಣ ಲಪಟಾಯಿಸುವ ಕೃತ್ಯವನ್ನು ಪೂಜಾರಿಯೊಬ್ಬ ಮಾಡಿದ್ದ. ಇದನ್ನು ನಂಬಿದ್ದ ಗ್ರಾಮದ ಮುಗ್ದ ಜನರು ಅನ್‌ಲಾಕ್ ಬಳಿಕ ನಿತ್ಯ ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮತ್ತು ಹರಿಕೆಗಳನ್ನು ತೀರಿಸಲು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿದ್ದರು.