ಬೆಳಗಾವಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಳಗಾವಿ ಜಿಲ್ಲಾಡಳಿತ ಸುವರ್ಣಸೌಧಕ್ಕೆ ಕೆಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ದೀಪಾಲಂಕಾರ ಮಾಡಿದ್ದು, ಸುವರ್ಣಸೌಧ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ತ್ರಿವರ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಸುವರ್ಣಸೌಧ ಬೆಳಗಾವಿ ತಾಲೂಕಿನ ಹಲಗಾ - ಬಸ್ತವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸುವರ್ಣಸೌಧವನ್ನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಆಂತರಿಕ ಭದ್ರತೆ ನೆಪವೊಡ್ಡಿ ಪೊಲೀಸ್ ಇಲಾಖೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದೆ. ಈ ಹಿನ್ನೆಲೆ ಜಿಲ್ಲಾಡಳಿತ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಯಾವ ಪುರುಷಾರ್ಥಕ್ಕಾಗಿ ಜಿಲ್ಲಾಡಳಿತ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ತ್ರಿವರ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಸುವರ್ಣಸೌಧ ತ್ರಿವರ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಸುವರ್ಣಸೌಧ ಪತ್ರಕರ್ತರಿಗೂ ನಿಷೇಧ:ಸುವರ್ಣಸೌಧ ದೀಪಾಲಂಕಾರದ ಸುದ್ದಿಗೆ ತೆರಳಿದ ಪತ್ರಕರ್ತರಿಗೂ ಭದ್ರತೆ ನೆಪವೊಡ್ಡಿ ಪೊಲೀಸರು ಗೇಟ್ನಲ್ಲೇ ತಡೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಪ್ರಶ್ನೆ ಮಾಡಿದ ಮಾಧ್ಯಮದವರೊಂದಿಗೆ ಪೊಲೀಸರು ಒರಟಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉತ್ತರ ಕರ್ನಾಟಕ ಭಾಗದ ಜನರ ಧ್ವನಿಯಾಗಬೇಕಿದ್ದ ಸುವರ್ಣಸೌಧ ಕೇವಲ ಜಿಲ್ಲಾಮಟ್ಟದ ಕಚೇರಿಗೆ ಸೀಮಿತವಾಗಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿವೆ. ಇತ್ತ ದೀಪಾಲಂಕಾರದಿಂದ ಕೂಡಿದ ಸುವರ್ಣಸೌಧ ಕಣ್ತುಂಬಿಕೊಳ್ಳಲು ಅವಕಾಶ ನೀಡದ ಜಿಲ್ಲಾಡಳಿತದ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳನ್ನೊಮ್ಮೆ ನೋಡಿ