ಬೆಂಗಳೂರು : ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಕಾರ್ಯಕರ್ತರ ಉದ್ಧಟತನ ಖಂಡಿಸಿ ಟಿ.ನಾರಾಯಣಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಇಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ.
ಎಂಇಎಸ್ ಉದ್ಧಟತನಕ್ಕೆ ಖಂಡನೆ : ಇಂದು ಕರವೇ ನಾರಾಯಣಗೌಡ ಬಣದಿಂದ ಸುವರ್ಣ ಸೌಧಕ್ಕೆ ಮುತ್ತಿಗೆ - ಕರವೇ ಕಾರ್ಯಕರ್ತರು ರ್ಯಾಲಿ
Belagavi riot: ಎಂಇಎಸ್ ಕಾರ್ಯಕರ್ತರ ದುಂಡಾವರ್ತನೆ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಇಂದು ಟಿ. ನಾರಾಯಣಗೌಡ ನೇತೃತ್ವದಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ಸವರ್ಣ ಸೌಧ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಾರಾಯಣಗೌಡ ಅವರು, ಮ. 12 ಗಂಟೆಗೆ ಸುವರ್ಣ ಸೌಧಕ್ಕೆ ಮುತ್ತಿಗೆಗೆ ತೀರ್ಮಾನವಾಗಿದೆ. ಎಂಇಎಸ್ ನಿಷೇಧಿಸಬೇಕೆಂದು ಹೋರಾಟಗಳನ್ನ ಮಾಡಿಕೊಂಡು ಬಂದಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ದುಂಡಾವರ್ತನೆ ಮಾಡುತ್ತಿದೆ. ಎಂಇಎಸ್ ಕಿಡಿಗೇಡಿಗಳು ರಾಯಣ್ಣನ ಪ್ರತಿಮೆ ಭಗ್ನ ಮಾಡಿದ್ದಾರೆ. ಇಂದು ಈ ಬಗ್ಗೆ ಸದನದಲ್ಲಿ ಬಗ್ಗೆ ಚರ್ಚೆಯಾಗಬೇಕು. ಎಲ್ಲಾ ಶಾಸಕರು ಬೆಳಗಾವಿಯ ವಿಚಾರವಾಗಿ ಧ್ವನಿ ಎತ್ತಬೇಕಿದೆ ಎಂದರು.
Belagavi Karave rally : ಅಲ್ಲದೆ, ಮಹಾರಾಷ್ಟ್ರ ರಾಜಕಾರಣಿಗಳು ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಉದ್ಧಟತನದಿಂದ ಮಾತನಾಡುತ್ತಿದ್ದಾರೆ. ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚುವುದು, ಹೋಟೆಲ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಸಾವಿರಾರು ಕರವೇ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. 144 ಸೆಕ್ಷನ್ ಇದ್ದರೂ, ಲಾಠಿ ಪ್ರದರ್ಶನ ಮಾಡಿದ್ರೂ ಕುಗ್ಗಲ್ಲ, ಜಗ್ಗುವುದಿಲ್ಲ ಎಂದು ನಾರಾಯಣಗೌಡ ಹೇಳಿದರು.