ಬೆಳಗಾವಿ:ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಎಸ್ಡಿಆರ್ಎಫ್ ಸಿಬ್ಬಂದಿ ಮಾನವೀಯತೆ ಮೆರೆದರು.
ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಎಸ್ಡಿಆರ್ಎಫ್ ಸಿಬ್ಬಂದಿ ಹುಕ್ಕೇರಿ ತಾಲೂಕಿನ ಶಂಕೇಶ್ವರ ಪಟ್ಟಣದ ನಿವಾಸಿ ರಾಜು ಮಟ್ಟೇಕರ ಬೆಳಗಾವಿಯ ಶಹಾಪುರದ ಸಂಬಂಧಿಯ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ 5 ಗಂಟೆಯ ಹೊತ್ತಿಗೆ ವಾಯುವಿಹಾರಕ್ಕೆ ಹೋದಾಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಾಜು ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ದಾಖಲಿಸಿರಲಿಲ್ಲ.
ಈ ವೇಳೆ ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಮನೆಗೆ ತೆರಳುತ್ತಿದ್ದ ಬೆಳಗಾವಿಯ ಎಸ್ಡಿಆರ್ಎಫ್ ನೌಕರ ಬಸಪ್ಪ ಬರಬಳ್ಳಿ ರಸ್ತೆ ಮೇಲೆ ನರಳಾಡುತ್ತಿದ್ದ ರಾಜು ಅವರನ್ನು ಗಮನಿಸಿದ್ದಾರೆ. ತಕ್ಷಣ ಅವರಿಗೆ ನೀರು ಕುಡಿಸಿ, ನಂತರ ಆ್ಯಂಬುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಗಾಯಾಳು ರಾಜು ಮಟ್ಟೆಕರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಐಹೊಳೆಯ ಈ ಮನೆಯಲ್ಲಿವೆ 150 ವರ್ಷ ಹಳೇಯ ತಾಳೆ ಗರಿಯ ಗ್ರಂಥಗಳು