ETV Bharat Karnataka

ಕರ್ನಾಟಕ

karnataka

ETV Bharat / city

ಗೋ ಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಸಿಎಂಗೆ ಮನವಿ - ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಖ್ಯಮಂತ್ರಿಗೆ ಮನವಿ

ಬಿಜೆಪಿ ಆದ್ಯತೆ ನೀಡಿ ಹೋರಾಟ ಮಾಡಿದ ಗೋಹತ್ಯೆ ಮತ್ತು ಲವ್ ಜಿಹಾದ್ ಎನ್ನುವ ಎರಡು ಪಿಡುಗುಗಳನ್ನು ರಾಜ್ಯದಲ್ಲಿ ಅತೀ ಶೀಘ್ರವಾಗಿ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಿಎಂ ಬಿಎಸ್​ವೈಗೆ ಮನವಿ ಸಲ್ಲಿಸಲಾಯಿತು.

State BJP Yuva Morcha appeal to CM
ಗೋಹತ್ಯೆ, ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಸಿಎಂಗೆ ಮನವಿ
author img

By

Published : Dec 5, 2020, 7:58 PM IST

ಬೆಳಗಾವಿ: ಗೋಹತ್ಯೆ ಮತ್ತು ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಆದ್ಯತೆ ನೀಡಿ ಹೋರಾಟ ಮಾಡಿದ ಗೋಹತ್ಯೆ ಮತ್ತು ಲವ್ ಜಿಹಾದ್ ಎನ್ನುವ ಎರಡು ಪಿಡುಗುಗಳನ್ನು ರಾಜ್ಯದಲ್ಲಿ ಅತೀ ಶೀಘ್ರವಾಗಿ ನಿಷೇಧಿಸಬೇಕು. ಈ ಎರಡು ವಿಷಯಗಳ ವಿರುದ್ಧ ನಿಮ್ಮ ನೇತೃತ್ವದಲ್ಲಿಯೇ ದಶಕಗಳಿಂದ ಹೋರಾಟ ಮಾಡಲಾಗಿದೆ. ಸಾಕಷ್ಟು ಕಾರ್ಯಕರ್ತರ ಬಲಿದಾನ ಕೂಡ ಆಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆಯಿಂದಲೂ ಗೋಹತ್ಯೆ ಮತ್ತು ಲವ್ ಜಿಹಾದ್ ನಿಷೇಧಿಸುವಂತೆ ರಾಜ್ಯದ ಯುವಕರು ಆಗ್ರಹಿಸುತ್ತಿದ್ದಾರೆ. ಹಾಗಾಗಿ ನಾಡಿನ ಯುವಕರು, ಬಿಜೆಪಿ ಯುವ ಮೋರ್ಚಾ ಎರಡು ಕಾಯ್ದೆಗಳ ಜಾರಿಗೆ ಒತ್ತಾಯಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಡಾ. ಸಂದೀಪಕುಮಾರ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

author-img

...view details