ಕರ್ನಾಟಕ

karnataka

ETV Bharat / city

ಪತ್ರಕರ್ತರಿಗೆ ಸ್ಟಾರ್ ಏರ್‌ಲೈನ್ಸ್​ನಿಂದ ಶೇ.20 ರಿಯಾಯಿತಿ ಘೋಷಣೆ - ರಾಜ್ಯದ ಪತ್ರಕರ್ತರಿಗೆ ಸ್ಟಾರ್​ ಏರ್​ಲೈನ್ಸ್​ ಆಫರ್​

ಮಾನ್ಯತೆ ಪಡೆದ ಪತ್ರಕರ್ತರಿಗೆ ರಾಜ್ಯದಲ್ಲಿ ಪ್ರಯಾಣ ಮಾಡುವ ವೇಳೆ ಶೇ.20ರಷ್ಟು ರಿಯಾಯಿತಿ ನೀಡಿ ಸ್ಟಾರ್ ಲೈನ್ ಏರಲೈನ್ಸ್​ ಸಂಸ್ಥೆ ಘೋಷಿಸಿದೆ.

star-airline
ಸ್ಟಾರ್ ಏರ್‌ಲೈನ್​

By

Published : Apr 28, 2022, 9:32 PM IST

ಬೆಳಗಾವಿ:ಸ್ಟಾರ್ ಲೈನ್ ಏರಲೈನ್ಸ್​ ಸಂಸ್ಥೆಯಿಂದ ಪತ್ರಕರ್ತರಿಗೆ ರಾಜ್ಯದಲ್ಲಿ ಪ್ರಯಾಣ ಮಾಡುವ ವೇಳೆ ಶೇ.20ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಖ್ಯಾತ ಉದ್ಯಮಿ, ಸ್ಟಾರ್ ಏರ್‌ಲೈನ್ಸ್​ ಸಂಸ್ಥಾಪಕ ಸಂಜಯ್ ಘೋಡಾವತ್ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘೋಷಣೆಯನ್ನು ಮಾಡಿದ್ದಾರೆ.

ಪತ್ರಕರ್ತರಿಗೆ ಸ್ಟಾರ್ ಏರ್‌ಲೈನ್ಸ್​ನಿಂದ ಶೇ.20 ರಿಯಾಯಿತಿ ಘೋಷಣೆ

ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ನೇತೃತ್ವದಲ್ಲಿ ಪತ್ರಕರ್ತರಿಂದ ಘೋಡಾವತ್ ಅವರಿಗೆ ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಘೋಡಾವತ್ ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಸುಡುಬಿಸಿಲಿಗೆ ಉ.ಕರ್ನಾಟಕ ತತ್ತರ: ಮುಂದಿನ 3 ದಿನ ಅಧಿಕ ಉಷ್ಣಾಂಶದ ಎಚ್ಚರಿಕೆ

For All Latest Updates

TAGGED:

ABOUT THE AUTHOR

...view details