ಕರ್ನಾಟಕ

karnataka

ETV Bharat / city

ಪರೀಕ್ಷೆಗೆ ಅವಕಾಶ ಕೋರಿ ಸೋಂಕಿತ ಬಾಲಕನ ಕಣ್ಣೀರು: ಡಿಡಿಪಿಐ ಹೇಳಿದ್ದೇನು? - SSLC Exam 2020

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನನಗೆ ಅವಕಾಶ ನೀಡಿ ಎಂದು ವೈದ್ಯರ ಬಳಿ ಕಣ್ಣೀರಿಟ್ಟಿದ್ದಾನೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಡಾ.ಎ.ಬಿ.ಪುಂಡಲೀಕ ಅವರು, ವಿದ್ಯಾರ್ಥಿಗೆ ಮುಂದಿನ ತಿಂಗಳು ನಡೆಯುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

SSLC exams begin amid Covid-19
ಡಿಡಿಪಿಐ ಡಾ.ಎ.ಬಿ.ಪುಂಡಲೀಕ

By

Published : Jun 25, 2020, 11:43 AM IST

ಬೆಳಗಾವಿ:ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸೋಂಕಿತ ಬಾಲಕ ಕಣ್ಣೀರಿಟ್ಟಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​​​​ನಲ್ಲಿ ನಡೆದಿದೆ.

ಜಿಲ್ಲೆಯ ಕಿತ್ತೂರು ತಾಲೂಕಿನ ಕಲಬಾವಿ ಗ್ರಾಮದ ಬಾಲಕನಿಗೆ ಜೂನ್ 20ರಂದು ಕೊರೊನಾ ಸೋಂಕು ತಗುಲಿದೆ. ಲಾಕ್​​ಡೌನ್ ಮುನ್ನವೇ ಬಾಲಕ ಚೆನ್ನೈನಲ್ಲಿರುವ ಅಕ್ಕನ ಮನೆಗೆ ಹೋಗಿದ್ದ. ಪರೀಕ್ಷೆಗೆಂದು ಮರಳಿ ಬಂದಾಗ ಆತನಲ್ಲಿ ವೈರಸ್​​​ ಇರುವುದು ಗೊತ್ತಾಗಿದೆ.

ಕೋವಿಡ್ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ದುಂಬಾಲು ಬಿದ್ದಿದ್ದ. ಓದಿನ ಶ್ರಮ ಹಾಳಾಗುತ್ತೆ, ಪರೀಕ್ಷೆಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿ ಕಣ್ಣೀರಿಟ್ಟಿದ್ದ. ಪರೀಕ್ಷೆಗೆಂದು ವಿದ್ಯಾರ್ಥಿ ಹಾಲ್ ಟಿಕೆಟ್ ಕೂಡ ಪಡೆದಿದ್ದನು.

ಡಿಡಿಪಿಐ ಡಾ.ಎ.ಬಿ.ಪುಂಡಲೀಕ

ಆಗ ಸೋಂಕಿತ ವಿದ್ಯಾರ್ಥಿ ಜೊತೆಗೆ ಫೋನ್ ಮೂಲಕ ಮಾತನಾಡಿರುವ ಬೆಳಗಾವಿ ಡಿಡಿಪಿಐ ಡಾ.ಎ.ಬಿ.ಪುಂಡಲೀಕ ಅವರು ಧೈರ್ಯ ತುಂಬಿದ್ದಾರೆ. ಪೂರಕ ಪರೀಕ್ಷೆಗೆ ಹೊಸ ವಿದ್ಯಾರ್ಥಿಯಾಗಿ ಪರಿಗಣಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ವೈದ್ಯಕೀಯ ಸಿಬ್ಬಂದಿಯೊಂದಿಗೂ ಮಾತನಾಡಿದ್ದು ಬಾಲಕ ಮಾನಸಿಕ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ.

ABOUT THE AUTHOR

...view details