ಕರ್ನಾಟಕ

karnataka

ETV Bharat / city

ರಮೇಶ್ ಜಾರಕಿಹೊಳಿ‌ ದೋಷಮುಕ್ತವಾಗುವಂತೆ ಅಭಿಮಾನಿಗಳಿಂದ ವಿಶೇಷ ಪೂಜೆ - ಜಾರಕಿಹೊಳಿ‌ ಸಿಡಿ ಪ್ರಕರಣ ಖುಲಾಸೆ ಆಗಲೆಂದು ಪ್ರಾರ್ಥನೆ

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದಲ್ಲಿ ದೋಷಮುಕ್ತರಾಗಿ ಹೊರಬರಲಿ ಎಂದು ಅವರ ಅಭಿಮಾನಿಗಳು, ಮುತ್ತೈದೆಯರು ಪ್ರಾರ್ಥಿಸಿದ್ದಾರೆ.

special worship from Ramesh jarakiholi fans at belagavi
ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ಖುಲಾಸೆ ಆಗಲೆಂದು ದೇವರ ಮೊರೆ ಹೋದ ಅಭಿಮಾನಿಗಳು

By

Published : Aug 13, 2021, 7:26 AM IST

ಬೆಳಗಾವಿ:ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ ಖುಲಾಸೆ ಆಗಲಿ ಎಂದು ಗೋಕಾಕ್ ತಾಲೂಕಿನ ಖನಗಾಂವ್ ಗ್ರಾಮದ ಖನ್ನಮ್ಮ ದೇವಿಗೆ ಅವರ ಅಭಿಮಾನಿಗಳು, ಮೂವತ್ತಕ್ಕೂ ಹೆಚ್ಚು ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿದರು.

ರಮೇಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಪ್ರಾರ್ಥನೆ

ಖನಗಾಂವ್ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ‌ ಮುತ್ತೈದೆಯರು ಆರತಿ ತಟ್ಟೆ ಹಿಡಿದು ದೇವಸ್ಥಾನಕ್ಕೆ ಆಗಮಿಸಿ ರಮೇಶ್ ಜಾರಕಿಹೊಳಿ‌ ಪ್ರಕರಣ ಖುಲಾಸೆಯಾಗಲಿ ಎಂದು ಖನ್ನಮ್ಮ ದೇವಿಯುಲ್ಲಿ ಬೇಡಿಕೊಂಡರು‌.

ಬಿ.ಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ನಡೆಸುತ್ತಿದ್ದ ಜಾರಕಿಹೊಳಿ‌ ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ನೂತನವಾಗಿ ರಚನೆಗೊಂಡ ಬೊಮ್ಮಾಯಿ ಸರ್ಕಾರದಲ್ಲಿಯೂ ಮರಳಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕಾದ್ರೆ ಪ್ರಕರಣದಿಂದ ಹೊರ ಬರಬೇಕು. ಸದ್ಯ ಪ್ರಕರಣದ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ:ಹಲೋ.. ಆಫ್ರಿಕಾ ಹೆಸರಿನಲ್ಲಿ ಆಫ್ರಿಕನ್ನರ ಜೊತೆ ಮಾತುಕತೆ ನಡೆಸಿದ ಬೆಂಗಳೂರು ಪೊಲೀಸರು

ABOUT THE AUTHOR

...view details