ಬೆಳಗಾವಿ:ಹೆತ್ತತಂದೆಯನ್ನೇ ಮಗ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇಡರಹಟ್ಟಿ ಗ್ರಾಮದಲ್ಲಿ ನಡೆದಿದೆ. ಕಲ್ಲಪ್ಪ ಪೂಜಾರಿ (51) ಕೊಲೆಯಾದವರು. ಯಲ್ಲಪ್ಪ (35) ಕೊಲೆ ಮಾಡಿದ ಆರೋಪಿ.
ಯಲ್ಲಪ್ಪ ನಿತ್ಯ ಕುಡಿದು ಬಂದು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದನಂತೆ. ಇದರಿಂದ ರೋಸಿ ಹೋದ ಯಲ್ಲಪ್ಪನ ಪತ್ನಿ ಮಾವ ಕಲ್ಲಪ್ಪನ ಗಮನಕ್ಕೆ ತಂದಿದ್ದಾಳೆ. ಇಂದು ಕೂಡ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ತಂದೆ ಕಲ್ಲಪ್ಪ ಬಿಡಿಸಲು ಬಂದಿದ್ದಾನೆ. ಆಗ ಕೈಗೆ ಸಿಕ್ಕ ಕುಡುಗೋಲಿನಿಂದ ತಂದೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೃತ ಕಲ್ಲಪ್ಪ ಇಬ್ಬರನ್ನು ವಿವಾಹವಾಗಿದ್ದು, ಆರೋಪಿ ಯಲ್ಲಪ್ಪ ಎರಡನೇ ಹೆಂಡತಿಯ ಪುತ್ರ ಎಂದು ತಿಳಿದು ಬಂದಿದೆ.