ಬೆಳಗಾವಿ: ಮತಾಂತರ ನಿಷೇಧ ವಿಧೇಯಕವನ್ನು ಈ ಅಧಿವೇಶನದಲ್ಲೇ ಮಂಡಿಸಲಿದ್ದೇವೆ. ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡೋದೇ ಸಿದ್ದರಾಮಯ್ಯ ಅವರ ಸ್ವಭಾವ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಇದೇ ವೇಳೆ ಕಿಡಿ ಕಾರಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ವಿರೋಧ ಮಾಡದೇ ಕಾಂಗ್ರೆಸ್ ಸಹಕಾರ ಕೊಡಬೇಕು. ಈ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಇದೆ. ನಮ್ಮ ರಾಜ್ಯದಲ್ಲೂ ತರುತ್ತೇವೆ. ಇಂತಹ ಕಾಯ್ದೆಗಳಿಗೆ ಸಿದ್ದರಾಮಯ್ಯ ವಿರೋಧ ಮಾಡುತ್ತಲೇ ಇರ್ತಾರೆ. ಕಾಂಗ್ರೆಸ್‌ನ ಕೆಲವರಿಗೆ ಈ ಕಾಯ್ದೆ ತರುವುದು ಇಷ್ಟವಿದ್ದು, ಸ್ವಾಗತ ಮಾಡ್ತಾ ಇದ್ದಾರೆ ಎಂದರು.