ಕರ್ನಾಟಕ

karnataka

ETV Bharat / city

ನಿರ್ಮಾಣ ಹಂತದ ಕಲಾಮಂದಿರ ಕಾಂಪೌಂಡ್ ಕುಸಿತ : 12 ಬೈಕ್‍ಗಳು ಜಖಂ - ಟಿಳಕವಾಡಿ ಕಲಾಮಂದಿರ ಕಾಂಪೌಂಡ್ ಕುಸಿತ

ಸ್ಮಾರ್ಟ್​ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಕಲಾಮಂದಿರದ ಗೋಡೆ ಕುಸಿದು 12 ಬೈಕ್​ಗಳು ಜಖಂಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಣ್ಣಿನಡಿ ಸಿಲುಕಿರುವ ಬೈಕ್​ಗಳನ್ನು ಹೊರತೆಗೆಯಲು ಬೈಕ್​ ಮಾಲೀಕರ ಹರಸಾಹಸ ಪಡುತ್ತಿದ್ದಾರೆ.

smart-city-project-building-compound-collapse-in-belagavi
ಕಲಾಮಂದಿರ ಕಾಂಪೌಂಡ್ ಕುಸಿತ

By

Published : Nov 9, 2020, 7:56 PM IST

ಬೆಳಗಾವಿ:ಕಲಾಮಂದಿರದಕಾಂಪೌಂಡ್ ಗೋಡೆ ಕುಸಿದು 12 ಬೈಕ್‍ಗಳು ಸಂಪೂರ್ಣವಾಗಿ ಜಖಂಗೊಂಡ ಘಟನೆ ನಗರದಟಿಳಕವಾಡಿಯಲ್ಲಿ ನಡೆದಿದೆ.

ಸ್ಮಾರ್ಟ್‍ಸಿಟಿ ಯೋಜನೆಯಡಿ ಟಿಳಕವಾಡಿಯಲ್ಲಿ ಕಲಾಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿತ್ತು. ಆದ್ರೆ, ಕಲಾಮಂದಿರದ ಕಾಂಪೌಂಡ್ ಗೋಡೆ ಇದ್ದಕ್ಕಿದ್ದಂತೆ ಇಂದು ಸಂಜೆ 4 ಗಂಟೆ ಸುಮಾರಿಗೆ ಕುಸಿದು ಬಿದ್ದ ಪರಿಣಾಮ ಕಾಂಪೌಂಡ್ ಹೊರ ಭಾಗ ನಿಲ್ಲಿಸಿದ್ದ 12ಕ್ಕೂ ಹೆಚ್ಚು ಬೈಕ್‍ಗಳಿಗೆ ಹಾನಿಯಾಗಿವೆ.

ಮಣ್ಣಿನಲ್ಲಿನಡಿ ಸಿಲುಕಿರುವ ಬೈಕ್‍ಗಳನ್ನು ಹೊರಗೆ ತೆಗೆಯಲು ಬೈಕ್ ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details