ಚಿಕ್ಕೋಡಿ:ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ದೂಧಗಂಗಾ, ವೇದಗಂಗಾ, ಕೃಷ್ಣಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಮಹಾ ಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತಗೊಂಡಿವೆ.
ದಕ್ಷಿಣ ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ: ಚಿಕ್ಕೋಡಿ ಜನರಲ್ಲಿ ಪ್ರವಾಹ ಭೀತಿ - ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ
ದೂಧಗಂಗಾ ನದಿಯ ಕಾರದಗಾ-ಬೋಜ್, ಕುನ್ನೂರ- ಬಾರವಾಡ, ಬೋಜ್- ಹುನ್ನರಗಿ, ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾವನಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ.

ಮಹಾ ಮಳೆಯಿಂದು ಕೃಷ್ಣೆಗೆ 60 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವು ಹೆಚ್ಚಳವಾಗಿದೆ. ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಬೋಜ್, ಕುನ್ನೂರ- ಬಾರವಾಡ, ಬೋಜ್- ಹುನ್ನರಗಿ, ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾವನಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ.
ಕುನ್ನೂರು-ಬಾರವಾಡ, ಕರಾದಗಾ-ಬೋಜ್ ಸೇತುವೆಗಳಿಗೆ ಮಾತ್ರ ನಿಪ್ಪಾಣಿ ತಾಲೂಕಾಡಳಿತ ಬ್ಯಾರಿಕೆಡ್ ಹಾಕಿದೆ. ಉಳಿದ ಸೇತುವೆಗಳಿಗೆ ಬ್ಯಾರಿಕೆಡ್ ಹಾಕಬೇಕಿದೆ. ಈ ಸೇತುಗಳ ಬಳಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದು ನದಿ ತೀರದ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಸದ್ಯ ಜಿಲ್ಲಾಡಳಿತ ಪ್ರವಾಹಕ್ಕೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕಿದೆ.
TAGGED:
ಸೇತುವೆಗಳು ಜಲಾವೃತ