ಚಿಕ್ಕೋಡಿ: ಮಹಾರಾಷ್ಟ್ರದ ಕೊಯ್ನಾ, ನವಜಾ, ಮಹಾಬಲೇಶ್ವರ, ವಾರಣಾ, ಕಾಳಮ್ಮವಾಡಿಯಲ್ಲಿ ಮುಂದುವರೆದ ಮಳೆಯಿಂದಾಗಿ ಕರ್ನಾಟಕದ ಕೆಲ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.
ಚಿಕ್ಕೋಡಿಯಲ್ಲಿ ಆರು ಸೇತುವೆ ಮುಳಗಡೆ ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ನ ಸದ್ಯದ ಒಳಹರಿವು 87,510 ಕ್ಯೂಸೆಕ್ ಹಾಗೂ ಹಿಪ್ಪರಗಿ ಬ್ಯಾರೆಜ್ನ ಹೊರ ಹರಿವು 83,300 ಕ್ಯೂಸೆಕ್ ಇದೆ. ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು ಆರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಪರ್ಯಾಯ ಮಾರ್ಗದಲ್ಲಿ ಸಂಚಾರ:
ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೊಳ, ಬೋಜ-ಕಾರದಗಾ, ಬೋಜವಾಡ-ಕುನ್ನೂರ, ಮಲ್ಲಿಕವಾಡ-ದತ್ತವಾಡ, ದಾನವಾಡ - ದತ್ತವಾಡ ಹಾಗೂ ಕಾಗವಾಡ ತಾಲೂಕಿನ ಉಗಾರ - ಕುಡಣಿ ಸೇತುವೆ ಕೂಡಾ ಮುಳಗಡೆಯಾಗಿದ್ದು, ಇಲ್ಲೂ ಕೂಡಾ ಜನರ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ಪರ್ಯಾಯವಾಗಿ ಉಗಾರ - ಕುಡಚಿ ರೈಲು ಮಾರ್ಗದ ಮೂಲಕ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಸಂಪರ್ಕ ಸೇತುವೆಗಳು ಮುಳುಗಡೆ ಹಿನ್ನಲೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.