ಕರ್ನಾಟಕ

karnataka

ETV Bharat / city

ಚಿಕ್ಕೋಡಿ: ಪ್ರವಚನಕ್ಕೆ ಬಂದಿದ್ದ ವೇಳೆ ಆಯತಪ್ಪಿ ಬಿದ್ದ ಸಿದ್ದೇಶ್ವರ ಸ್ವಾಮೀಜಿಗೆ ಗಂಭೀರ ಗಾಯ - ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಶ್ರೀಗಳನ್ನು ಕನ್ನೇರಿಮಠದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿದ್ದೇಶ್ವರ ಸ್ವಾಮೀಜಿ ಕಾಲಿಗೆ ಗಂಭೀರ ಗಾಯ
ಸಿದ್ದೇಶ್ವರ ಸ್ವಾಮೀಜಿ ಕಾಲಿಗೆ ಗಂಭೀರ ಗಾಯ

By

Published : Jan 10, 2022, 8:56 PM IST

ಚಿಕ್ಕೋಡಿ: ಸ್ನಾನ ಗೃಹದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಕಾಲಿಗೆ ಗಂಭೀರ ಪ್ರಮಾಣದ ಗಾಯವಾಗಿದೆ. ಅವರನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಮಠದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ ತಾಲೂಕಿನ ಕೇರೂರು‌ ಗ್ರಾಮದಲ್ಲಿ ಇಂದಿನಿಂದ ಆಧ್ಯಾತ್ಮಿಕ ಪ್ರವಚನ ನೀಡಲು ಸಿದ್ದೇಶ್ವರ ‌ಸ್ವಾಮೀಜಿ ವಿಜಯಪುರದಿಂದ ಆಗಮಿಸಿದ್ದರು. ಮೊದಲನೆಯ ದಿನವಾದ ಇಂದು ಹೀರೆಕೊಡಿಯ ಮಗದುಮ್ಮ ಫಾರ್ಮ್ ಹೌಸ್​​ನಲ್ಲಿ ತಂಗಿದ್ದರು. ಈ ವೇಳೆ ಸ್ನಾನದ ಗೃಹಕ್ಕೆ ಹೋಗಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಇತ್ತ ಶ್ರೀಗಳಿಗೆ ಕಾಲಿಗೆ ಗಾಯವಾದ ಹಿನ್ನೆಲೆ ಕೇರೂರ ಗ್ರಾಮದಲ್ಲಿ ನಡೆಯಬೇಕಿದ್ದ ಪ್ರವಚನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

(ಇದನ್ನೂ ಓದಿ: ಇಲಾಖೆಗಳ ಕಾರ್ಯನಿರ್ವಹಣೆ ಬಗ್ಗೆ ಶ್ರೇಯಾಂಕ ನೀಡಲು ಮಾನದಂಡ ನಿಗದಿ: ಅಧಿಕಾರಿಗಳಿಗೆ ಸಿಎಂ ಸೂಚನೆ)

For All Latest Updates

ABOUT THE AUTHOR

...view details