ಬೆಳಗಾವಿ: ಮತಾಂತರ ನಿಷೇಧ ಮಸೂದೆ ವಿರೋಧಿಸಿ ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಎಂಎಲ್‌ಸಿ ಐವಾನ್ ಡಿಸೋಜಾ ಬೆಂಬಲ ಸೂಚಿಸಿದ್ದಾರೆ.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಾಮಾಜಿಕ ಆರ್ಥಿಕ ಅಸಮಾನತೆ ಹೋಗಲಾಡಿಸಲು ಸರ್ಕಾರ ಕೆಲಸ ಮಾಡಬೇಕು. ಅದನ್ನು ಬಿಟ್ಟು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ಮತಾಂತರ ಕಾಯ್ದೆ ತರುತ್ತಿದೆ. ಬಿಜೆಪಿ ಪಕ್ಷ ಏನೂ ಕೆಲಸ ಮಾಡಿಲ್ಲ. ನರೇಂದ್ರ ಮೋದಿ ಬಂದು ದೇಶವನ್ನು ಹಾಳುಮಾಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ವಿರೋಧ ರಾಜ್ಯವನ್ನು ಇವರು ಹಾಳು ಮಾಡಿದ್ದಾರೆ. ಸಮಸ್ಯೆಗಳನ್ನು ಬೇರೆಡೆಗೆ ಡೈವರ್ಟ್ ಮಾಡಲು ಇಂತಹ ಕೆಲಸ ಮಾಡ್ತಿದ್ದಾರೆ. ನಾವು ಅಧಿಕಾರದಲ್ಲಿ ಇರಲಿ ಬಿಡಲಿ ಮತಾಂತರ ಕಾಯ್ದೆ ವಿರೋಧ ಮಾಡ್ತೀವಿ. ಮತಾಂತರ ಕಾಯ್ದೆ ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಿ ಪಾಸ್ ಮಾಡಿದ್ರೆ, ನಾವು 2023ಕ್ಕೆ ಅಧಿಕಾರಕ್ಕೆ ಬಂದೇ ಬರ್ತಿವಿ. ಆಗ ವಾಪಸ್ ಪಡೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಮಂಡಿಸಿದ ನಿಲುವಳಿ ಸೂಚನೆ ತಿರಸ್ಕರಿಸಿದ ಸ್ಪೀಕರ್: ಸದನದಲ್ಲಿ ಆಡಳಿತ - ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ
ಅಧಿಕಾರಕ್ಕೆ ಬಂದರೆ ಮಸೂದೆ ವಾಪಸ್ ಎಚ್ಚರಿಕೆ
ಸಮಾಜದಲ್ಲಿ ಮನುಷ್ಯರಾಗಿ ಬದುಕಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿರಲಿ ಮೊದಲು ಮನುಷ್ಯರಾಗಬೇಕು. ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಮನುಷ್ಯತ್ವ ಇಲ್ಲದೇ ಇರೋದು ಅದ್ಯಾವ ಸಮಾಜ. ಪೂಜೆ ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಯಾವುದೇ ಧರ್ಮ, ದೇಶದ ಆಧಾರದಲ್ಲಿ ಸಂವಿಧಾನ ರಚನೆ ಆಗಿಲ್ಲ. ಮೊದಲು ನಾವೆಲ್ಲರೂ ಭಾರತೀಯರು. ಅದನ್ನೇ ಸಂವಿಧಾನ ಹೇಳಿದೆ ಎಂದು ತಿಳಿಸಿದರು.
ಬಳಿಕ ಐವಾನ ಡಿಸೋಜಾ ಮಾತನಾಡಿ, ಕ್ರೈಸ್ತ ಸಮುದಾಯ ಗುರಿಯಿಟ್ಟುಕೊಂಡು ಕಾನೂನು ತರಲು ಹೊರಟಿರೋದು ಜಗಜ್ಜಾಹೀರವಾಗಿದೆ. ಬಲವಂತವಾಗಿ ಮತಾಂತರ ಮಾಡಿದ್ದನ್ನು ಒಂದು ಉದಾಹರಣೆ ಕೊಡಲಿ. ಗೂಳಿಹಟ್ಟಿ ಶೇಖರ್ ತಮ್ಮ ತಾಯಿಯನ್ನು ಮತಾಂತರ ಮಾಡಿದ್ದಾರೆ ಅಂದ್ರು. ಬಳಿಕ ಮತ್ತೆ ತಾಯಿ ವಾಪಸ್ ಬಂದ್ರು. ಬಲವಂತ ಮತಾಂತರ ಆಗಿಲ್ಲ ಎಂದ್ರು.
ಸಚಿವ ಬೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹ ಅಲ್ಪಸಂಖ್ಯಾತರು, ಹಿಂದುಳಿದವರು, ಎಸ್‌ಟಿ ಸಮುದಾಯ ಮುಂದೆ ಬರಬಾರದು ಎಂಬ ಉದ್ದೇಶ ಬಿಜೆಪಿಗಿದೆ. ಬಿಜೆಪಿಗೆ ಹಿಂದೂ ಮುಸ್ಲಿಂ ಕ್ರೈಸ್ತರು ಒಗ್ಗಟ್ಟಾಗಿರಬಾರದು. ಹಿಂದೂತ್ವ ಅಫೀಮು ಜನರಲ್ಲಿ ಹಾಕಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೆ ದೇಶ ಗಟ್ಟಿಯಾಗೋದು ಬೇಡ ಅವರು ಗಟ್ಟಿಯಾಗೋದು ಬೇಕು. ಬಿಜೆಪಿ, ಆರ್ಎಸ್ಎಸ್ ಏಜೆಂಟರನ್ನು ಬಿಟ್ಟು ಎಲ್ಲರೂ ವಿರೋಧಿಸುತ್ತಿದ್ದಾರೆ. ಜೆಡಿಎಸ್‌ನವರು ಸಹ ಮಸೂದೆ ವಿರೋಧಿಸೋದಾಗಿ ಹೇಳಿದ್ದಾರೆ. ಬಿಜೆಪಿಯ ಶೇಕಡ 50ರಷ್ಟು ನಾಯಕರು ಸಹ ಮಸೂದೆ ವಿರೋಧಿಸುತ್ತಿದ್ದಾರೆ ಎಂದರು.
ಬೈರತಿ ಬಸವರಾಜ್ ರಾಜೀನಾಮೆ ನೀಡಬೇಕು ಇಲ್ಲ ಸರ್ಕಾರವೇ ಅವರನ್ನು ವಜಾ ಮಾಡಬೇಕು: ಸಿದ್ದರಾಮಯ್ಯ ಆಗ್ರಹ
ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರಂಟ್ ಪಡೆದಿರುವ ಸಚಿವ ಬೈರತಿ ಬಸವರಾಜ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಬೆಳಗಾವಿ ಸುವರ್ಣ ಸೌಧದ ಶಾಸಕಾಂಗ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬೈರತಿ ವಿಚಾರವಾಗಿ ಸಮಜಾಯಿಷಿ ನೀಡುವ ಕಾರ್ಯವನ್ನು ಸರ್ಕಾರದವರು ಮಾಡುತ್ತಿದ್ದಾರೆ.
ಕೂಡಲೇ ಅವರು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಸರ್ಕಾರವೇ ವಜಾಗೊಳಿಸಬೇಕು. ಕೋಟ್ಯಂತರ ರೂ. ಮೌಲ್ಯದ ಜಮೀನು ಹಗರಣ ಇದಾಗಿದೆ. ಮಂತ್ರಿಯಾಗಿರುವವರು ಬೇರೆಯವರ ಹೆಸರಲ್ಲಿ ಜಮೀನು ಕಬಳಿಸಿರುವುದು ದೊಡ್ಡ ಅಪರಾಧ. ಇದರಿಂದ ಸಚಿವರಾಗಿ ಇರಲು ಅವರಿಗೆ ನೈತಿಕ ಹಕ್ಕಿಲ್ಲ. ನಾವು ಪ್ರಕರಣದ ಸತ್ಯತೆ ಆಧಾರವಾಗಿಟ್ಟುಕೊಂಡು ಹೋಗುತ್ತಿದ್ದೇವೆ.
ಸಚಿವರಾಗಿ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಮಾನವೀಯತೆ ದೃಷ್ಟಿಯಿಂದ ಅವರ ರಾಜೀನಾಮೆಗೆ ಒತ್ತಾಯಿಸುತ್ತೇವೆ. ಮಾಡದಿದ್ದರೆ ಸರ್ಕಾರ ವಜಾಗೊಳಿಸಬೇಕು. ಇದನ್ನು ಒಂದು ತಾರ್ಕಿಕ ಅಂತ್ಯ ಕಾಣಿಸುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.
ಬಿಟ್ ಕಾಯಿನ್, ಶೇ 40 ರಷ್ಟು ಕಮಿಷನ್, ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆಗೆ ನಾವು ಸಿದ್ಧ. ಇವರು ಅಧಿವೇಶನವನ್ನು ಮುಂದುವರಿಸಲಿ. ನಾವು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಸದ್ಯ ಈ ಹೋರಾಟ ಮುಂದುವರಿಸುತ್ತೇವೆ. ಸಾರ್ವಜನಿಕ ವಿಚಾರದ ಚರ್ಚೆಗೆ ನಾವು ಸಿದ್ಧ. ಅದಕ್ಕೆ ಅವಕಾಶ ಕೊಡಬೇಕು. ಬೈರತಿ ಬಸವರಾಜ್ ಹಗರಣ ವಿರುದ್ಧ ಚರ್ಚೆಗೆ ಅವಕಾಶ ಕೊಡಬೇಕು, ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪರಿಷತ್ ನಲ್ಲಿ ಚರ್ಚೆಗೆ ಅವಕಾಶ ನೀಡಲಾಗಿದ್ದು, ಇಲ್ಲೇಕೆ ನೀಡಲ್ಲ. ಗಣಪತಿ ಆತ್ಮಹತ್ಯೆ ವಿಚಾರವಾಗಿ ಜಾರ್ಜ್ ಕೂಡಲೇ ರಾಜೀನಾಮೆ ನೀಡಿದ್ದರು. ಇದಕ್ಕೆ ಬಿಜೆಪಿ ಒತ್ತಾಯಿಸಿತ್ತು. ಈಗೇಕೆ ಅದು ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.