ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​​ಗೆ​​​ ಇತಿಶ್ರೀ: ಶೆಟ್ಟರ್​​​ - ಕಾಗವಾಡ ಉಪ ಚುನಾವಣೆ

ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರ್ನಾಮ ಆಗುತ್ತೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​

By

Published : Nov 25, 2019, 9:54 PM IST

ಚಿಕ್ಕೋಡಿ: ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರ್ನಾಮ ಆಗುತ್ತೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಜಗದೀಶ್​ ಶೆಟ್ಟರ್, ಸಚಿವ
ಡಿಸೆಂಬರ್‌ 5ರಂದು ಕಾಗವಾಡ ಉಪ ಚುನಾವಣಾ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪರ ಬೆಂಬಲ ಸಿಗ್ತಿದೆ. ಅಥಣಿ, ಗೋಕಾಕ್​ ಮತ್ತು ಕಾಗವಾಡ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈಗಾಗಲೇ ನೆರೆ ಸಂತ್ರಸ್ತ ಗ್ರಾಮಗಳಲ್ಲಿ ವಿದ್ಯುತ್ ತೊಂದರೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅದನ್ನ ಬಗೆಹರಿಸಲಾಗುವುದು. ಅಧಿಕಾರಿಗಳು ಭ್ರಷ್ಟಾಚಾರ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಅನರ್ಹ ಶಾಸಕರ ಕುರಿತು ಕೊಟ್ಟ ಕುದುರೆ ಏರದವರು ವೀರನೂ ಅಲ್ಲ, ಧೀರನೂ ಅಲ್ಲ​ ಎಂಬ ಶಾಸಕಿ ಹೆಬ್ಬಾಳ್ಕರ್​ ಹೇಳಿಕೆಗೆ ತಿರುಗೇಟು ನೀಡಿದ‌ ಅವರು, ಹೆಬ್ಬಾಳ್ಕರ್ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಹೇಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ತಮ್ಮ ಕ್ಷೇತ್ರಕ್ಕ ಸೀಮಿತವಾಗಿರಬೇಕು. ಅವರು ಕೆಟ್ಟದಾಗಿ ಮಾತಾನಾಡಿದರೂ ಅಂತಾ ನಾವು ಏಕೆ ಕೆಟ್ಟದಾಗಿ ಮಾತನಾಡಬೇಕು ಎಂದರು.

ಎಂಟು ಸೀಟ್ ಬರದೇ ಇದ್ರೆ ರಾಜೀನಾಮೆ ಕೊಡ್ತಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್​, ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಅಂದ್ರೆ ಅವರು ಏಕಾಂಗಿ ಆಗಿದ್ದಾರೆ. ಉಳಿದ ಕಾಂಗ್ರೆಸ್ ನಾಯಕರ ಸಪೋರ್ಟ್ ಸಿಗುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೆಸೇಜ್ ಸಿದ್ದರಾಮಯ್ಯಗೆ ಹೋಗಿದೆ. ಹೀಗಾಗಿ ಅವರು ಸೋಲುತ್ತೀವಿ. ಈ ಜವಾಬ್ದಾರಿ ಯಾರ ಮೇಲೆ ಹೊರಿಸಬೇಕು ಅಂತಾ ಅದಕ್ಕಾಗಿ ಹೈಕಮಾಂಡ್​ಗೆ ಮೆಸೇಜ್ ಮುಟ್ಟಿಸಿದ್ದಾರೆ. ಈ ಚುನಾವಣೆ ಆದ ಬಳಿಕ ಕಾಂಗ್ರೆಸ್ ಜೀರೋ ಫಲಿತಾಂಶ ಆಗುತ್ತೆ. ಇದರಿಂದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದರು.

ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಈ ಚುನಾವಣೆಯಲ್ಲಿ ಬಹುಮತ ಸಿಗುತ್ತದೆ. 15 ಸೀಟ್ ಗೆಲ್ಲುತ್ತೇವೆ. ನಮಗೆ ಯಾರದ್ದೂ ಅವಶ್ಯಕತೆ ಇಲ್ಲ. ಯಾರಿಗೂ ಬಾ ಅಂತಾ ಒತ್ತಾಯ ಮಾಡಲ್ಲ. ಅವರಾಗಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಮಾಡ್ತೀವಿ ಎಂದರು.

ABOUT THE AUTHOR

...view details