ಚಿಕ್ಕೋಡಿ:ಕಳೆದ ಮೂರು ವಾರಗಳಿಂದ ನಾನು ಬೆಡ್ ರೆಸ್ಟ್ನಲ್ಲಿದ್ದೇನೆ. ಘಟನೆ ನಡೆದ ಸಮಯದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ. ದೇವದಾಸ್ ವರ್ಷದಲ್ಲಿ ಎರಡು ಎಫ್ಐಆರ್ ನನ್ನ ಮೇಲೆ ಹಾಕ್ತಾನೆ. ಇಲ್ಲಿವರೆಗೂ ಯಾವುದೇ ಚಾರ್ಚ್ ಶೀಟ್ ಆಗಿಲ್ಲ ಎಂದು ಜಮೀನು ಅತಿಕ್ರಮಣ ಹಾಗೂ ಜೀವ ಬೆದರಿಕೆ ಆರೋಪದ ಕುರಿತು ಶಾಸಕ ಶ್ರೀಮಂತ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಎಫ್ಐಆರ್ ದಾಖಲು ಕುರಿತು ಶಾಸಕ ಶ್ರೀಮಂತ್ ಪಾಟೀಲ್ ಸ್ಪಷ್ಟನೆ 10 ಎಕರೆ ಜಮೀನು ಅತಿಕ್ರಮಣ ಹಾಗೂ ಜೀವ ಬೆದರಿಕೆ ಮಾಡಿರುವುದಾಗಿ ದೇವದಾಸ್ ಶೇರ್ಖಾನೆ ಎಂಬುವರು ಶ್ರೀಮಂತ್ ಪಾಟೀಲ್ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಶಾಸಕ ಪಾಟೀಲ್, ಕಳೆದ ಮೂರು ವಾರಗಳಿಂದ ನಾನು ಬೆಡ್ ರೆಸ್ಟ್ನಲ್ಲಿದ್ದೇನೆ. ಎಸ್ಪಿ ಸಾಹೇಬರು ಫೋನ್ ಬಂದ್ಮೇಲೆ ನನಗೆ ಘಟನೆಯ ಬಗ್ಗೆ ಗೊತ್ತಾಗಿದೆ. ನನ್ನ ಮೇಲೆ ಎಫ್ಐಆರ್ ದಾಖಲಿಸಿರುವ ದೇವದಾಸ್ ಶೇರ್ಖಾನೆ ಅವರು ಬಹಳ ಸಾರಿ ಇಂತಹ ದೂರುಗಳನ್ನು ದಾಖಲಿಸಿದ್ದಾರೆ.
ಪ್ರತಿ ವರ್ಷವೂ ಸಹ ನನ್ನ ಮೇಲೆ ಎರಡು ಎಫ್ಐಆರ್ ಮಾಡುತ್ತಾರೆ. ಅವರು ನೀಡಿದ ಯಾವುದೇ ಕಂಪ್ಲೆಂಟ್ ಚಾರ್ಜ್ ಶೀಟ್ ಆಗಿಲ್ಲ. ಎಲ್ಲವೂ ಸಹ ನೂರು ಪರ್ಸೆಂಟ್ ಬೋಗಸ್ ಕಂಪ್ಲೆಂಟ್ ಆಗಿರುತ್ತವೆ ಎಂದಿದ್ದಾರೆ.
ಓದಿ-ಜಮೀನು ಅತಿಕ್ರಮಣ ಆರೋಪ: ಶಾಸಕ ಶ್ರೀಮಂತ್ ಪಾಟೀಲ್, ಅವರ ಪುತ್ರನ ವಿರುದ್ಧ ದೂರು
ನಾನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನನ್ನ ವಿರುದ್ಧ ಯಾವುದೇ ಕಂಪ್ಲೆಂಟ್ ಬಂದರೂ ಸಹ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದೇನೆ. ಶಾಸಕರಾಗಿರಲಿ, ಮಂತ್ರಿಗಳಾಗಿರಲಿ, ನನ್ನ ಮಕ್ಕಳೇ ಆಗಿರಲಿ ದೂರು ದಾಖಲಿಸಿ ಎಂದಿದ್ದೇನೆ.
ನನ್ನ ಮೇಲೆ ಮಾತ್ರ ಆತ ದೂರು ಕೊಟ್ಟಿಲ್ಲ. ಎಸ್ಪಿ, ಡಿಸಿ, ಮುಂತಾದ ಇಲಾಖೆಗಳ ಅಧಿಕಾರಿಗಳ ಮೇಲೂ ಸಹ ಆತ ಅಟ್ರಾಸಿಟಿ ಕೇಸ್ ಹಾಕಿದ್ದಾನೆ. ಕಾಯ್ದೆಗಳನ್ನು ವಕೀಲ ದೇವದಾಸ್ ಶೇರಖಾನೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರಿಗೂ ಧನ್ಯವಾದಗಳನ್ನು ತಿಳಿಸಿದ ಶಾಸಕರು ತಪ್ಪಿದ್ದರೆ ಕ್ರಮವಾಗಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.