ಚಿಕ್ಕೋಡಿ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು, ನಾಲ್ಕು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಹೊರವಲಯದ ಕಮತೆ ತೋಟದಲ್ಲಿ ನಡೆದಿದೆ.
ಸದಲಗಾ ಪಟ್ಟಣದ ಬಾಳಪ್ಪ ಮಲ್ಲಪ್ಪ ಕಮತೆ ಅವರ ಎರಡು ಎತ್ತು, ಒಂದು ಹಸು, ಒಂದು ಎಮ್ಮೆ ಒಟ್ಟು ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಬೆಂಕಿ ನಂದಿಸಲು ಸುತ್ತಮುತ್ತಲಿನ ರೈತರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ.