ಕರ್ನಾಟಕ

karnataka

ETV Bharat / city

ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ: ಬೆಳಗಾವಿಯ ಶಾಕೀರ್ ಅಹ್ಮದ್​ಗೆ 583ನೇ ರ್‍ಯಾಂಕ್

ಕಳೆದ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಮೂವರು ತೇರ್ಗಡೆ ಹೊಂದಿದ್ದು, ಈಗ ರಾಮಾಪುರಸೈಟ್ ಗ್ರಾಮದ ಶಾಕೀರ್ ಅಹ್ಮದ್ 583ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

shakir ahmed  583 rank in upsc exam
ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ: ಬೆಳಗಾವಿಯ ಶಾಕೀರ್ ಅಹ್ಮದ್ 583ನೇ ರ್‍ಯಾಂಕ್

By

Published : Sep 24, 2021, 11:57 PM IST

Updated : Sep 25, 2021, 12:03 AM IST

ಬೆಳಗಾವಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರಸೈಟ್ ಗ್ರಾಮದ ಶಾಕೀರ್ ಅಹ್ಮದ್ 583ನೇ ರ್‍ಯಾಂಕ್ ಪಡೆದಿದ್ದಾರೆ.

2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶಾಕೀರ್ ಅಹ್ಮದ್ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ 2015ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದು ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾಗಿದ್ದ ಶಾಕೀರ್ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸರ್ಕಾರಿ ಅಧಿಕಾರಿಯಾಗಿ ಕೆಲಸದಲ್ಲಿದ್ದುಕೊಂಡೇ ಓದಿ ಯುಪಿಎಸ್‌ಸಿಯಲ್ಲಿ ಶಾಕೀರ್ ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿಯಲ್ಲಿ ಸಾಧನೆಗೈದಿರುವ ಶಾಕೀರ್ ಅವರು ಕೃಷಿ ಇಲಾಖೆಯ ನಿವೃತ್ತ ನೌಕರ ಅಕ್ಬರ್‌ಸಾಬ್ ತೋಂಡಿಖಾನ್ ಅವರ ಪುತ್ರರಾಗಿದ್ದಾರೆ.

ಕಳೆದ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ತೇರ್ಗಡೆ ಹೊಂದಿದ್ದರು.

ಇದನ್ನೂ ಓದಿ:UPSC Result: ಮೊದಲ ಸಲ ಸೋಲು, ಎರಡನೇ ಪ್ರಯತ್ನದಲ್ಲಿ 77ನೇ ರ‍್ಯಾಂಕ್‌

Last Updated : Sep 25, 2021, 12:03 AM IST

ABOUT THE AUTHOR

...view details