ಬೆಳಗಾವಿ: ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ವರ್ಸಸ್ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕರು ವಿಭಿನ್ನ ಹೇಳಿಕೆ ನೀಡಿದ್ದು, ಶಾಸಕ ಅಭಯ್ ಪಾಟೀಲ ನಡೆಗೆ ಪರೋಕ್ಷವಾಗಿ ಅನಿಲ್ ಬೆನಕೆ ಅಸಮಾಧಾನಗೊಂಡರಾ ಎಂಬ ಅನುಮಾನ ಮೂಡಿದೆ.
ನಗರದ ಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿ ಹಿಂದೆ ಮಂದಿರವಾಗಿತ್ತು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಡಿಸಿ ಭೇಟಿಯಾಗಿ ಸರ್ವೇ ಸತ್ಯಾಂಶ ತಿಳಿಸುವಂತೆ ಮನವಿ ಮಾಡಿಕೊಂಡಿದ್ದರು. ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಹಿ ಮಸೀದಿಯ ವಿಡಿಯೋ ಸರ್ವೆಗೆ ಆಗ್ರಹಿಸಿ ಡಿಸಿಗೆ ಶಾಸಕ ಅಭಯ್ ಪಾಟೀಲ ಮನವಿ ಮಾಡಿದ್ದರು.
ಅಭಯ್ ಪಾಟೀಲ್ ಮನವಿಗೆ ಅನಿಲ್ ಬೆನಕೆ ತದ್ವಿರುದ್ಧ ಹೇಳಿಕೆ ನೀಡಿದ್ದು, '1991ರ ಕಾಯ್ದೆ ಪ್ರಕಾರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಿ. ಶಾಹಿ ಮಸೀದಿ ವಿವಾದದ ಬಗ್ಗೆ ಮಾಹಿತಿ ಪಡೆಯಲು ಎಲ್ಲರಿಗೂ ಹೇಳಿದ್ದೇವೆ. ಅದರ ಬಗ್ಗೆ ಮಾಹಿತಿ ಇದ್ದರೆ 1991ರ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.