ಕರ್ನಾಟಕ

karnataka

ETV Bharat / city

ಬಿಜೆಪಿಯ ಆಂತರಿಕ ಕಲಹದ ತೀವ್ರತೆ ಮೇಲೆ ಮಧ್ಯಂತರ ಚುನಾವಣೆ ನಿರ್ಧಾರ: ಸತೀಶ್​ ಜಾರಕಿಹೊಳಿ - ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ನ್ಯೂಸ್​

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಉಮೇಶ್​ ಕತ್ತಿಯವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ ಆಗಲಿದೆ. ಬಿಜೆಪಿಯ ಆಂತರಿಕ ಕಲಹದ ತೀವ್ರತೆ ಮೇಲೆ ಮಧ್ಯಂತರ ಚುನಾವಣೆ ನಿರ್ಧಾರ ಆಗಲಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

Satish Jarkiholi
ಸತೀಶ್​ ಜಾರಕಿಹೊಳಿ

By

Published : May 30, 2020, 1:37 PM IST

Updated : May 30, 2020, 1:45 PM IST

ಬೆಳಗಾವಿ: ಬಿಜೆಪಿಯ ಆಂತರಿಕ ಕಲಹದ ತೀವ್ರತೆ ಆಧಾರದ ಮೇಲೆ ಮಧ್ಯಂತರ ಚುನಾವಣೆ ನಿರ್ಧಾರ ಆಗಲಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

ಮಧ್ಯಂತರ ಚುನಾವಣೆ ಕುರಿತು ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಟ್ಟು ಮೂರು ಗುಂಪುಗಳಿವೆ. ಜನತಾ ಪರಿವಾರದಿಂದ ಬಂದವರ ಒಂದು ಗುಂಪು, ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರ ಒಂದು ಗುಂಪು ಹಾಗೂ ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರುವವರ ಒಂದು ಗುಂಪು, ಹೀಗೆ 3 ಗುಂಪುಗಳಿವೆ. ಹೀಗಾಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ ಎಂದರು.

ಸಿದ್ದರಾಮಯ್ಯ ಭೇಟಿಗೆ ಉಮೇಶ್​ ಕತ್ತಿ ಯತ್ನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯಲ್ಲಿ ಯಾರು ಯಾರನ್ನು ಬೇಕಾದರೂ ಭೇಟಿ ಆಗಬಹುದು. ಉಮೇಶ್​ ಕತ್ತಿಯವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ ಆಗಲಿದೆ. ಇನ್ನು ಮಧ್ಯಂತರ ಚುನಾವಣೆ ಬಂಡಾಯದ ಕುಸ್ತಿಯ ಮೇಲೆ ನಿರ್ಧಾರವಾಗಲಿದ್ದು, ಇದೀಗ ಕುಸ್ತಿ ಆರಂಭವಾಗಿದೆ. ಕೇವಲ ಸೆಡ್ಡು ಹೊಡೆದು ಹೊರಗೆ ನಿಂತು ಬಾಳಿಕಾಯಿ ತಗೊಂಡು ವಾಪಸ್ ಬಂದ್ರೆ ಏನೂ ಪ್ರಯೋಜನವಿಲ್ಲ. ನಿಜವಾದ ಕುಸ್ತಿ ಆದ್ರೆ ಮಾತ್ರ ನಾಯಕತ್ವ ಬದಲಾವಣೆ, ಮಧ್ಯಂತರ ಚುನಾವಣೆ ಆಗಲಿದೆ ಎಂದರು.

ಉತ್ತರ ಕರ್ನಾಟಕ ಭಾಗದ ಶಾಸಕರಿಂದ ಪ್ರಹ್ಲಾದ್​ ಜೋಶಿ ಹೆಸರು ಪ್ರಸ್ತಾಪ ಮಾಡಿದರೆ, ಈಗ ಹೋಗಿರುವ ಕಾಂಗ್ರೆಸ್ ಟೀಂ ಸಹ ಜಗದೀಶ್ ಶೆಟ್ಟರ್​ ಪರ ಬ್ಯಾಟಿಂಗ್ ಮಾಡುತ್ತಿದೆ. ಸ್ವತಃ ಲಾಭಕ್ಕೆ ಬಿಜೆಪಿಗೆ ಹೋಗಿದ್ದಾರೆ. ಅವರು ತಮ್ಮ ಲೆಕ್ಕಾಚಾರದ ಆಧಾರದ ಮೇಲೆ ಶೆಟ್ಟರ್ ಪರ ಲಾಬಿ ಮಾಡುತ್ತಿದ್ದಾರೆ ಎಂದರು.

ಸಚಿವ ರಮೇಶ್​ ಜಾರಕಿಹೊಳಿ ಇನ್ನೂ 5 ಜನ ಶಾಸಕರ ಆಪರೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೊಂದಲ ಮಾಡುವುದು ರಮೇಶ್​ ಜಾರಕಿಹೊಳಿ ಬಂಡವಾಳ. ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರೂ ಬಿಜೆಪಿಗೆ ಹೋಗುವುದಿಲ್ಲ. ಹೋದರೂ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಕಾಂಗ್ರೆಸ್​ನಿಂದ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ಮಾಡುವ ಅವಶ್ಯಕತೆ ಕಾಂಗ್ರೆಸ್​ಗೆ ಇಲ್ಲ. ಬಿಜೆಪಿ ಶಾಸಕರನ್ನು ಸೆಳೆಯುವಷ್ಟು ದೊಡ್ಡ ಪ್ರಮಾಣದ ಬ್ಯಾಂಕ್ ಬ್ಯಾಲೆನ್ಸ್ ನಮ್ಮಲ್ಲಿ ಇಲ್ಲ ಎಂದರು.

Last Updated : May 30, 2020, 1:45 PM IST

ABOUT THE AUTHOR

...view details