ಕರ್ನಾಟಕ

karnataka

ಗುರು ಸಿದ್ದರಾಮಯ್ಯಗೆ ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಕೊಟ್ಟ ಸತೀಶ್​ ಜಾರಕಿಹೊಳಿ: Video

By

Published : Oct 20, 2021, 7:15 PM IST

ಸತೀಶ್ ಜಾರಕಿಹೊಳಿ‌ ಅವರು ತಮ್ಮ ರಾಜಕೀಯ ಗುರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್​ನಲ್ಲಿ ಡ್ರಾಪ್​ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

Satish jarkiholi gives drop to Siddaramaiah on helicopter
ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಕೊಟ್ಟ ಸತೀಶ್​ ಜಾರಕಿಹೊಳಿ

ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಅವರು ತಮ್ಮ ಗುರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಗುರು ಸಿದ್ದರಾಮಯ್ಯಗೆ ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಕೊಟ್ಟ ಸತೀಶ್​ ಜಾರಕಿಹೊಳಿ..

ತಮ್ಮ ಒಡೆತನೆದ ಹೆಲಿಕಾಪ್ಟರ್​​ನಲ್ಲಿ ಸತೀಶ್ ಜಾರಕಿಹೊಳಿ‌ ಸಿಂದಗಿ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ್ದರು. ಸಿದ್ದರಾಮಯ್ಯ ಕೂಡ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಪ್ರಚಾರದ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಬೇಕಿತ್ತು. ಸತೀಶ್ ಜಾರಕಿಹೊಳಿ‌ ಅವರು ಗುರುವಿಗೆ ತಮ್ಮ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನವರೆಗೆ ಡ್ರಾಪ್ ಮಾಡಿದ್ದಾರೆ.

ಬೈಕ್, ಕಾರಲ್ಲಿ ಡ್ರಾಪ್, ಪಿಕಪ್ ಕೊಡುವುದನ್ನು ನೋಡಿದ್ದೇವೆ. ಆದರೆ ಸತೀಶ್ ಜಾರಕಿಹೊಳಿ‌ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯನವರಿಗೆ ಹೆಲಿಕಾಪ್ಟರ್​​ನಲ್ಲಿ ಡ್ರಾಪ್ ಮಾಡಿ ಗಮನ ಸೆಳೆದಿದ್ದಾರೆ.

ಉಭಯ ನಾಯಕರು ಹೆಲಿಕಾಪ್ಟರ್ ಮೂಲಕ ಸಿಂದಗಿಯಿಂದ ಗೋಕಾಕ್​​ವರೆಗೆ ಬಂದಿದ್ದಾರೆ. ತುರ್ತು ಕೆಲಸದ ನಿಮಿತ್ತ ಸತೀಶ್ ಗೋಕಾಕ್​​ನಲ್ಲಿ ಇಳಿದು ತಮ್ಮ ಮನೆಗೆ ತೆರಳಿದ್ದಾರೆ. ನಂತರ ಸಿದ್ದರಾಮಯ್ಯನವರು ಸತೀಶ್ ಜಾರಕಿಹೊಳಿ‌ ಅವರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು.

ಮೂರು ಕ್ಷೇತ್ರಗಳ ಪರಿಷತ್ ಚುನಾವಣೆ ಸಂಬಂಧವೂ ಉಭಯ ನಾಯಕರು ಪ್ರಯಾಣದ ವೇಳೆ ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ಸತೀಶ್​ ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದೆ ಜೆಡಿಎಸ್​​ನಿಂದ ಹೊರ ಬಂದ ಸಿದ್ದರಾಮಯ್ಯ ರಾಜ್ಯಾದ್ಯಂತ ನಡೆಸಿದ ಅಹಿಂದ ಸಮಾವೇಶಕ್ಕೆ ಸತೀಶ್ ಬೆನ್ನೆಲುಬಾಗಿ ನಿಂತಿದ್ದರು. ನಂತರ ಸಿದ್ದರಾಮಯ್ಯ ಜತೆಗೆ ಸತೀಶ್​​ ಕೂಡ ಕಾಂಗ್ರೆಸ್ ಸೇರಿದ್ದರು. ಸಿದ್ದರಾಮಯ್ಯ ಕ್ಯಾಬಿನೆಟ್​​ನಲ್ಲಿಯೂ ಸತೀಶ್ ಎರಡೂವರೆ ವರ್ಷ ಸಚಿವರಾಗಿದ್ದರು.

ಸದ್ಯ ಸತೀಶ್ ಜಾರಕಿಹೊಳಿ‌ ಗೋಕಾಕ್​ನಲ್ಲಿ ಇಳಿದು ಸಿದ್ದರಾಮಯ್ಯನವರನ್ನು ಬೀಳ್ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ABOUT THE AUTHOR

...view details