ಬೆಳಗಾವಿ: ನಮ್ಮ ಪಕ್ಷದ ಉನ್ನತ ನಾಯಕ ಜಮೀರ್ ಅಹ್ಮದ್‌ಖಾನ್. ಅವರನ್ನು ನೀವು ಎಲ್ಲ ರೀತಿಯಿಂದ ಬೆಳಸಬೇಕು. ಅವರು ನಮ್ಮ ಪಕ್ಷದ ಬಾಹುಬಲಿ. ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 3ರಂದು ಸಿದ್ದರಾಮಯ್ಯ ಅವರ ಹುಟ್ಟು ಹಬ್ಬ ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ. ಬೆಂಗಳೂರಿನಿಂದ ನಮಗೆ ಆಹ್ವಾನ ನೀಡಲು ಜಮೀರ್ ಬಂದಿದ್ದಾರೆ. ಜಾಫರ್ ಶರೀಫ್ ನಂತರ ಮತ್ತೊಬ್ಬ ಮುಸ್ಲಿಂ ನಾಯಕರಾಗಲು ಜಮೀರ್‌ಗೆ ಅವಕಾಶವಿದೆ. ಈ ಚುನಾವಣೆಯಲ್ಲಿ ನೀವೆಲ್ಲಾ ಒಗ್ಗಟ್ಟಾಗಬೇಕು. ಬರುವ ಚುನಾವಣೆಯಲ್ಲಿ ಗಟ್ಟಿಯಾಗಿರಬೇಕು ಎಂದರು.