ಕರ್ನಾಟಕ

karnataka

ETV Bharat / city

ಜ್ಞಾನ ಪಡೆಯುವ ಕಾಲದಲ್ಲಿ ಧರ್ಮ,ಜಾತಿ ಸಮಸ್ಯೆ ಆಗಬಾರದು.. ಅದು ಇಲ್ಲಿಗೇ ನಿಲ್ಲಬೇಕು.. ಸತೀಶ್ ‌ಜಾರಕಿಹೊಳಿ - ಕೇಸರಿ ಶಾಲು ಕುರಿತು ಸತೀಶ್ ‌ಜಾರಕಿಹೊಳಿ ಹೇಳಿಕೆ

ಅವರವರ ಜಾತಿ-ಧರ್ಮ ಅವರ ಜೊತೆಯೇ ಇರುತ್ತದೆ. ಆದ್ರೆ, ಶಾಲಾ ಕಾಲೇಜುಗಳಲ್ಲಿ ಜಾತಿ-ಧರ್ಮ ತರುವುದು ಸರಿಯಲ್ಲ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸುವುದು ಸರಿಯಲ್ಲ..

satish jarakiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

By

Published : Feb 4, 2022, 5:19 PM IST

Updated : Feb 4, 2022, 5:44 PM IST

ಬೆಳಗಾವಿ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸುವುದು ಸರಿಯಲ್ಲ ಎಂದು ‌ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಅವರವರ ಜಾತಿ-ಧರ್ಮ ಅವರ ಜೊತೆಯೇ ಇರುತ್ತದೆ. ಆದ್ರೆ, ಶಾಲಾ ಕಾಲೇಜುಗಳಲ್ಲಿ ಜಾತಿ-ಧರ್ಮ ತರುವುದು ಸರಿಯಲ್ಲ. ಸರ್ಕಾರ ಈ ಹಿಜಾಬ್, ಕೇಸರಿ ಶಾಲು ವಿವಾದ ತಡೆಯಲು ಮುಂದಾಗಬೇಕು. ಎಲ್ಲ ಕಡೆ ಸ್ಪ್ರೆಡ್ ಆದ್ರೆ ಬಹಳ ದೊಡ್ಡ ಸಮಸ್ಯೆ ಆಗುತ್ತದೆ ಎಂದರು.

ಸ್ಕಾರ್ಫ್‌-ಶಾಲು ವಿವಾದ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿರುವುದು..

ರಾಮದುರ್ಗದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿರುವುದು ಸರಿಯಲ್ಲ.‌ ಆ ರೀತಿ ಎಲ್ಲೂ ನಡೆಯಬಾರದು ಎಂಬುದು ನಮ್ಮ ಕಳಕಳಿಯ ಮನವಿ. ಇಲ್ಲಿ ರಾಜಕಾರಣ ಇಲ್ಲ. ಆದರೆ, ಧರ್ಮದ ವ್ಯವಸ್ಥೆ ಆ ರೀತಿ ಮಾಡುತ್ತಿದೆ.

ಮೊದಲು ಧರ್ಮಗಳನ್ನು ಪೂರ್ಣ ಅಧ್ಯಯನ ಮಾಡಬೇಕು. ಕೇಸರಿ ಶಾಲು ಹಾಕು, ಮತ್ತೊಂದು ಶಾಲು ಹಾಕು ಅಂತಾ ಯಾವುದೇ ಧರ್ಮಗಳು ಹೇಳಿಲ್ಲ. ಧರ್ಮಗಳು ಒಳ್ಳೆಯದನ್ನೇ ಹೇಳಿವೆ. ಆದರೆ, ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ಹಿಜಾಬ್, ಶಾಲು ಹಾಕೊಂಡ್​ ಬಂದ್ರೆ ನೋ ಎಂಟ್ರಿ.. ಕೋರ್ಟ್ ತೀರ್ಪು ಬರೋವರೆಗೂ ಸಮವಸ್ತ್ರ ಧರಿಸಿಯೇ ಬರಬೇಕು: ಶಿಕ್ಷಣ ಸಚಿವ

ಜ್ಞಾನ ಪಡೆಯುವ ಕಾಲದಲ್ಲಿ ಧರ್ಮ, ಜಾತಿ ಸಮಸ್ಯೆ ಆಗಬಾರದು. ಅದು ಇಲ್ಲಿಗೇ ನಿಲ್ಲಬೇಕು ಎಂಬುದು ನಮ್ಮ ಮನವಿ. ಬಹಳಷ್ಟು ಪರ-ವಿರೋಧ ಸಂಘಟನೆಗಳಿವೆ. ಆಯಾ ಶಾಲಾ ಆಡಳಿತ ಮಂಡಳಿಗಳು ಸಂಧಾನದ ಮೂಲಕ ಸಮಸ್ಯೆ ಶಮನ ಮಾಡಬೇಕು. ಸಮವಸ್ತ್ರ ನೀತಿ ನಮ್ಮಂತಹ ದೊಡ್ಡ ದೇಶದಲ್ಲಿ ಜಾರಿಗೆ ತರುವುದು ಕಷ್ಟ ಎಂದರು.

Last Updated : Feb 4, 2022, 5:44 PM IST

ABOUT THE AUTHOR

...view details