ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಳೆ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಕೊನೆ ಹಂತದ ಕಸರತ್ತು ಆರಂಭಿಸಿದ್ದಾರೆ. ಈ ನಡುವೆಯೇ ಮತದಾರರಿಗೆ ಸೀರೆ ಹಂಚುತ್ತಿದ್ದ ಯುವಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಕೊನೆ ಹಂತದ ಕಸರತ್ತು ಆರಂಭಿಸಿದ ಗ್ರಾಪಂ ಅಭ್ಯರ್ಥಿಗಳು: ಸೀರೆ ಹಂಚುತ್ತಿದ್ದವನಿಗೆ ಗ್ರಾಮಸ್ಥರಿಂದ ತರಾಟೆ
ಗ್ರಾಪಂ ಚುನಾವಣೆ ಹಿನ್ನೆಲೆ ಸೀರೆ ಹಂಚಲು ಬಂದಿದ್ದ ಯುವಕನನ್ನು ಗ್ರಾಮಸ್ಥರು ತರಾಟೆಗೆ ತಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪದಲ್ಲಿ ನಡೆದಿದೆ.
ಸೀರೆ ಹಂಚಲು ಬಂದಿದ್ದ ಯುವಕ
ದಾಸ್ತಿಕೊಪ್ಪ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಯುವಕನೋರ್ವ ಸೀರೆ ಹಂಚುತ್ತಿದ್ದ. ಈ ವೇಳೆ ಯುವಕನನ್ನು ಗ್ರಾಮಸ್ಥರು ತರಾಟೆಗೆ ತಗೆದುಕೊಂಡಿದ್ದು, ನಮ್ಮ ಮನೆಯ ಹೆಂಗಸರಿಗೆ ಸೀರೆ ಕೊಡಿಸುವುದು ನಮಗೆ ಗೊತ್ತಿದೆ, ನಿಮ್ಮ ಸೀರೆಯ ಅಗತ್ಯ ನಮಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನು ವಾರ್ಡ್ ನಂಬರ್ 4ರ ಅಭ್ಯರ್ಥಿ ಕಾಶವ್ವ ಕಿಲಾರಿ ಪರ ಮತ ಚಲಾಯಿಸುವಂತೆ ಸೀರೆ ಹಂಚಿಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.