ಬೆಳಗಾವಿ:ಪ್ರವಚನ ಮಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾದ (heart attack) ಸ್ವಾಮೀಜಿಯೊಬ್ಬರು ಜನ್ಮದಿನದಂದೇ ಶಿವನ ಪಾದ ಸೇರಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಳೋಬಾಳ್ (Balobal) ಗ್ರಾಮದಲ್ಲಿ ನಡೆದಿದೆ.
Video - ಪ್ರವಚನ ಮಾಡುವಾಗಲೇ ತೀವ್ರ ಹೃದಯಾಘಾತ; ಜನ್ಮದಿನದಂದೇ ಶಿವೈಕ್ಯರಾದ ಸ್ವಾಮೀಜಿ - ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು
ತಮ್ಮ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ (53) ಕೊನೆಯುಸಿರೆಳೆದಿದ್ದಾರೆ.
![Video - ಪ್ರವಚನ ಮಾಡುವಾಗಲೇ ತೀವ್ರ ಹೃದಯಾಘಾತ; ಜನ್ಮದಿನದಂದೇ ಶಿವೈಕ್ಯರಾದ ಸ್ವಾಮೀಜಿ Sanganabasava Mahaswamiji died by heart attack while giving speech](https://etvbharatimages.akamaized.net/etvbharat/prod-images/768-512-13646177-thumbnail-3x2-megha.jpg)
Sanganabasava Mahaswamiji died by heart attack while giving speech
ಪ್ರವಚನ ಮಾಡುತ್ತಲೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಸ್ವಾಮೀಜಿ
ನವೆಂಬರ್ 6ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ (53) (Sanganabasava Mahaswamiji) ಅವರ ಜನ್ಮದಿನದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುರ್ಚಿ ಮೇಲೆ ಕುಳಿತು ಆಶೀರ್ವಚನ ನೀಡುತ್ತಿದ್ದ ವೇಳೆ ಸಂಗನಬಸವ ಮಹಾಸ್ವಾಮೀಜಿ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.
ಬಿದ್ದ ಕ್ಷಣವೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಬೀಳುವ ದೃಶ್ಯ ಭಕ್ತರ ಮೊಬೈಲ್ನಲ್ಲಿ ಸೆರೆಯಾಗಿದೆ.
Last Updated : Nov 16, 2021, 11:26 AM IST