ಬೆಳಗಾವಿ:ಎಂಇಎಸ್ ಮುಖಂಡನಿಗೆ ಕಪ್ಪು ಮಸಿ ಬಳಿದು ಜೈಲು ಪಾಲಾಗಿದ್ದ ನಾಲ್ವರು ಕನ್ನಡ ಹೋರಾಟಗಾರರು ನಿನ್ನೆಯಷ್ಟೇ(ಮಂಗಳವಾರ) ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ನವ ನಿರ್ಮಾಣ ಸೇನೆ ಯುವ ಘಟಕದ ಜಿಲ್ಲಾಧ್ಯಕ್ಷ ಸಂಪತ್‌ಕುಮಾರ್ ದೇಸಾಯಿ, ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಖುಷಿ ಪಡಬೇಕೋ ಅಥವಾ ನಮ್ಮ ಸರ್ಕಾರವೇ ನಮ್ಮನ್ನು ಒಳಗೆ ಹಾಕಿತು ಅಂತಾ ದುಃಖ ಪಡಬೇಕೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಭಾವುಕರಾದರು.
ಎಂಇಎಸ್ ಪುಂಡರು ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಸುಟ್ಟು ಹಾಕಿದರು. ಎಂಇಎಸ್ ಎಷ್ಟೇ ಪುಂಡಾಟಿಕೆ ಪ್ರದರ್ಶಿಸಿದರೂ ಅದನ್ನು ಎದುರಿಸಲು ಸಿದ್ದರಿದ್ದೇವೆ. ಕನ್ನಡ ಪರ ಹೋರಾಟಗಾರರಿಗೆ ಜೈಲು ಸೇರೋದು ಸಾಮಾನ್ಯ. ಮುಂದೆ ಎಷ್ಟೇ ಕಷ್ಟ ಆದರೂ ಕನ್ನಡಪರ ಹೋರಾಟ ಬಿಡುವುದಿಲ್ಲ. ಜೈಲು ಸೇರಿದ ಮರುದಿನವೇ ನಮ್ಮ ವಿರುದ್ಧ 307 ಕೇಸ್ ದಾಖಲಾಗಿದ್ದು ಗೊತ್ತಾಯ್ತು ಎಂದರು.