ಬೆಳಗಾವಿ :ಕೇಸರಿ ಧ್ವಜ ಹಿಂದೂಗಳಿಗೆ ಸೀಮಿತವಾಗಿಲ್ಲ. ಅದೊಂದು ತ್ಯಾಗದ ಸಂಕೇತ. ತ್ಯಾಗದ ಮನೋಭಾವ ಇರುವವರು ಮಾತ್ರ ಭಗವಾ ಧ್ವಜವನ್ನ ಧರಿಸುತ್ತಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಕಾಗವಾಡದಲ್ಲಿ ಮಾತನಾಡಿದ ಅವರು, ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ಅವರ ಹೇಳಿಕೆ ಅವರ ವೈಯಕ್ತಿಕ ಭಾವನೆ. ಯಾರಲ್ಲಿ ತ್ಯಾಗದ ಮನೋಭಾವ ಇರುತ್ತದೆಯೋ ಅವರು ಆ ಉಡುಪನ್ನು ತೊಡಬೇಕಾಗುತ್ತದೆ.
ದೇಶಕ್ಕಾಗಿ, ಸಮಾಜಕ್ಕಾಗಿ ತಾನು ತ್ಯಾಗ ಮಾಡುತ್ತೇನೆ ಎನ್ನುವವರು ಅದನ್ನ ಧರಿಸುತ್ತಾರೆ. ಇದೇ ವಿಚಾರದಲ್ಲಿ ಈಶ್ವರಪ್ಪ ಅವರು ಹೇಳಿರಬಹುದು ಎಂದು ಅವರ ಹೇಳಿಕೆಯನ್ನು ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.