ಕರ್ನಾಟಕ

karnataka

ETV Bharat / city

ಆರ್​​ಟಿಐ ಕಾರ್ಯಕರ್ತ ಶ್ರೀಧರ್ ಕೊಲೆ ಪ್ರಕರಣ: ಆರೋಪಿಯ ಬಂಧನ - ಹೊಸಪೇಟೆ ಶ್ರೀಧರ್ ಕೊಲೆ ಪ್ರಕರಣ

ಜುಲೈ 15ರಂದು ಸಂಜೆ 6ಕ್ಕೆ ಹರಪನಹಳ್ಳಿ ಪಟ್ಟಣದಲ್ಲಿ ಶ್ರೀಧರ್ ಅವರನ್ನು ಕಬ್ಬಿಣ ರಾಡಿನಿಂಡ ಹೊಡೆದು ಕೊಲೆ ಮಾಡಲಾಗಿತ್ತು.

rti-worker-sridhar-murder-case-accuse-arrest
ಆರ್​​ಟಿಐ ಕಾರ್ಯಕರ್ತನ ಶ್ರೀಧರ್ ಕೊಲೆ ಪ್ರಕರಣ

By

Published : Jul 18, 2021, 6:20 PM IST

ಹೊಸಪೇಟೆ (ವಿಜಯನಗರ): ಕಬ್ಬಿಣದ ರಾಡ್​​ನಿಂದ ಹೊಡೆದು ಆರ್​ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಎಚ್.ಕೆ.ಹಾಲೇಶ್ ಎಂದು ಗುರುತಿಸಲಾಗಿದೆ.

ಜುಲೈ 13ರಂದು ನನಗೆ ಜೀವ ಬೆದರಿಕೆ ಬಂದಿತ್ತು. ನಂತರ ಪಿ.ಟಿ.ಪರಮೇಶ್ವರ ನಾಯ್ಕ ಮಗ ಭರತ್ ಮೇಲೆ ಪ್ರಕರಣ ದಾಖಲಿಸಿದ್ದೆ. ಅಲ್ಲದೇ, ಹಾಲೇಶ್ ಎನ್ನುವರ ಮೇಲೆ ದೂರು ದಾಖಲಿಸಿದ್ದೇನೆ. ಹಾಗಾಗಿ‌‌ ನನಗೆ ಅವರಿಂದ ಜೀವಭಯವಿದೆ ಎಂದು ಶ್ರೀಧರ್​ ತಮ್ಮ ಪತ್ನಿಗೆ ತಿಳಿಸಿದ್ದರು. ಇದನ್ನೇ ದೂರಿನಲ್ಲಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಲೇಶ್ ಎಂಬಾತನನ್ನು ಬಂಧಿಸಿದ್ದಾರೆ.

ಹಾಲೇಶ್ ಬಂಧನವಾಗುತ್ತಿದಂತೆ ಪಿಟಿಪಿ ಮಗ ಭರತ್ ನಾಯ್ಕ್ ತೆಲೆಮರಿಸಿಕೊಂಡಿದ್ದಾನೆ ಎಂದು ಗುಮಾನಿ ಎದ್ದಿದೆ. ಎಚ್.ಕೆ ಹಾಲೇಶ್ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಜೊತೆ ಫೋಟೋ ತೆಗೆಸಿಕೊಂಡಿರುವುದು ವೈರಲ್‌ ಆಗಿದೆ.

ABOUT THE AUTHOR

...view details