ಬೆಳಗಾವಿ: ಬೆಳಗಾವಿಯಲ್ಲಿ ವಾಹನ ಅಡ್ಡಗಟ್ಟಿ 4.97 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಲಹೊಂಗಲ ತಾಲೂಕಿನ ಗದ್ದಿನಕರವಿನ ಕೊಪ್ಪ ಗ್ರಾಮದಲ್ಲಿ ಏಪ್ರಿಲ್ 8 ರಂದು ಘಟನೆ ನಡೆದಿದ್ದು ಇಂದು ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಮೂಲದ ಸಾಂಗ್ಲಿಯ ಚಿನ್ನದ ವ್ಯಾಪಾರಿ ವಿಲಾಸ ಕದಂ ಕೊಲ್ಹಾಪುರದ ಲಕ್ಷ್ಮೀ ಗೋಲ್ಡ್ ಎನ್ನುವ ಚಿನ್ನದ ಅಂಗಡಿ ವ್ಯಾಪಾರಿ ಹಣ ಕಳೆದುಕೊಂಡಿದ್ದಾರೆ. ಕೊಲ್ಲಾಪುರದಿಂದ ಉಡುಪಿಗೆ 4.97ಕೋಟಿ ಹಣವನ್ನು ಗೋಣಿ ಚೀಲ, ರಟ್ಟಿನ ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಬೈಲಹೊಂಗಲ ತಾಲೂಕಿನ ಗದ್ದಿನಕರವಿನಕೊಪ್ಪ ಬಳಿ ನಾಲ್ಕೈದು ಜನರ ದುಷ್ಕರ್ಮಿಗಳ ಗುಂಪೊಂದು ಗನ್, ಚಾಕು ತೋರಿಸಿ ದರೋಡೆ ಮಾಡಿ ಪರಾರಿ ಆಗಿದ್ದಾರೆ.