ಅಥಣಿ :ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ, ಅಥಣಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ನೆರೆ ಸಂತ್ರಸ್ತರು ಹಾಗೂ ರೈತರು, ತಹಶೀಲ್ದಾರ್ಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ ವಿರೋಧಿಸಿ ತಹಶೀಲ್ದಾರ್ಗೆ ಮನವಿ - Mini vidhanasoudha at athani
ಇಂದು ಅಥಣಿ ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ನೆರೆ ಸಂತ್ರಸ್ತರು ಹಾಗೂ ರೈತರು, ನೆರೆ ಪರಿಹಾರ ವಿತರಣೆಯಲ್ಲಿ ನಡೆದ ತಾರತಮ್ಯವನ್ನು ಸರಿಪಡಿಸಬೇಕೆಂದು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ಗೆ ಮನವಿ
ನೆರೆ ಸಂತ್ರಸ್ತರಿಂದ ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಅಥಣಿ ತಹಶೀಲ್ದಾರ್, ಯಾವುದರಲ್ಲಿ ಲೋಪದೋಷಗಳಾಗಿವೆ ಎಂಬುದನ್ನು ಕಂಡು ಹಿಡಿದು ನೆರೆ ಸಂತ್ರಸ್ತರಿಗೆ ತಾಲೂಕು ಆಡಳಿತ ಸ್ಪಂದಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಮಾತನಾಡಿದ ರೈತ ಮುಖಂಡರು, ನೆರೆಯಿಂದ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೇವೆ. ತಾಲೂಕು ಆಡಳಿತ ನೆರೆ ಪರಿಹಾರದಲ್ಲಿ ತಾರತಮ್ಯ ಮಾಡಿರುವುದನ್ನು ನೋಡಿ ಹತಾಶೆಯಾಗಿದೆ ಎಂದರು.
TAGGED:
ಅಥಣಿ ನ್ಯೂಸ್