ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ಮಂಡಿಸಿದ್ದೇವೆ ತಾಕತ್ ಇದ್ದರೆ ಈ ಬಿಲ್ ತಡೆಯಿರಿ ಎಂದು ಎಂ.ಪಿ.ರೇಣುಕಾಚಾರ್ಯ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ಮತಾಂತರ ಕಾಯ್ದೆ ಕುರಿತು ರೇಣುಕಾಚಾರ್ಯ ಹೇಳಿಕೆ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಿಲ್ ಹರಿದು ಹಾಕಿದ್ದಾರೆ. ಕದ್ದು ಮುಚ್ಚಿ ಬಿಲ್ ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ನಾವು ಕದ್ದುಮುಚ್ಚಿ ಬಿಲ್ ಮಂಡಿಸಿಲ್ಲ. ಮತಾಂತರ ನಿಷೇಧ ತರಬೇಕು ಅಂತ ರಾಜಾರೋಷವಾಗಿ ಮಂಡಿಸಿದ್ದೇವೆ. ಒಬ್ಬ ಜಾರ್ಜ್ಗೋಸ್ಕರ, ಒಬ್ಬ ಸೋನಿಯಾ ಗಾಂಧಿಗೋಸ್ಕರ ಬಿಲ್ ವಿರೋಧ ಮಾಡುತ್ತಿದ್ದಾರೆ. ಮೊದಲೇ ಇವರು ಹಿಂದೂ ವಿರೋಧಿಗಳು. ಕ್ರೈಸ್ತ, ಮುಸ್ಲಿಂ ಒಲೈಕೆಗೆ ಹೀಗೆ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.
ನೀವು, ನಿಮ್ಮ ಕುಟುಂಬ ಮತಾಂತರ ಆಗಿ : ಲೋಕಸಭೆ, ವಿಧಾನಸಭೆಯಲ್ಲಿ ಜನ ನಿಮಗೆ ಬುದ್ದಿ ಕಲಿಸಿದ್ದಾರೆ. ಮತಾಂತರ ಕಾಯ್ದೆ ವಿರೋಧ ಮಾಡುವುದು ಮತಾಂತರಕ್ಕೆ ಪ್ರಚೋದನೆ ಕೊಟ್ಟಂತೆ. ವಿರೋಧ ಮಾಡುವುದಾದರೆ ಮೊದಲು ನೀವು ನಿಮ್ಮ ಕುಟುಂಬದವರು ಮತಾಂತರ ಆಗಿ. ಇದು ಹಿಂದೂ ದೇಶ, ಭಾರತ ದೇಶ. ಹಿಂದೂಗಳನ್ನು ಆಸೆ ಅಮಿಷಕ್ಕೆ ಒಳಪಡಿಸಿ ಮತಾಂತರ ಮಾಡಲು ಹೊರಟಿದ್ದಾರೆ. ಇವರ ಅನುಮತಿ ನಮಗೆ ಬೇಡ. ನಾವು ಹಿಂದೂಗಳು ಪಾಕಿಸ್ತಾನದಲ್ಲಿ ಮಂಡಿಸಲು ಆಗುತ್ತಾ ಎಂದು ಪ್ರಶ್ನಿಸಿದರು.
ಮುಸ್ಲಿಂ ಮಹಿಳೆ ಹಿಂದೂ ಹುಡುಗನನ್ನ ಮದುವೆ ಆಗ್ತಾರಾ? : ನಾವು ಭಾರತದಲ್ಲಿ ಮಂಡಿಸಿದ್ದೇವೆ. ನಮ್ಮ ದೇಶದಲ್ಲಿ ಮಂಡಿಸಿದ್ದೇವೆ. ಲವ್ ಜಿಹಾದ್ ಮಾಡಿ ಹೆಣ್ಣು ಮಕ್ಕಳಿಗೆ ಎಷ್ಟು ಕಿರುಕುಳ ನೀಡಿದ್ದಾರೆ ?. ಹಿಂದೂಗಳು ಸೌಮ್ಯವಾದಿಗಳು ಮುಸ್ಲಿಂ ಯುವಕರು ಆಸೆ ಆಮಿಷಕ್ಕೆ ಒಳಪಡಿಸಿ ಮದ್ವೆ ಆಗಿದ್ದಾರೆ. ಒಬ್ಬ ಮುಸ್ಲಿಂ ಮಹಿಳೆ ನಮ್ಮ ಹಿಂದೂ ಹುಡುಗನನ್ನ ಮದ್ವೆಯಾಗಿದ್ದಾರಾ ? ಎಂದು ಪ್ರಶ್ನಿಸಿದರು.