ಕರ್ನಾಟಕ

karnataka

ETV Bharat / city

ರಾಧಾನಗರಿ ಅಣೆಕಟ್ಟಿನ ಗೇಟ್​ನಲ್ಲಿ ತಾಂತ್ರಿಕ ದೋಷ : ಕರ್ನಾಟಕದತ್ತ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು - radhanagari dam gate problem

ಮುಂಜಾನೆ ರಾಧಾನಗರಿ ಜಲಾಶಯ ಗೇಟ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿ ರಾಧಾನಗರಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬರುತ್ತಿದೆ. ಜಲಾಶಯದ ಮೂರು ಗೇಟ್ ಮುಖಾಂತರ ಎಂಟು ಟಿಎಂಸಿ ನೀರು ಹರಿದು ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ..

rdhanagari dam gate opens due to technical snag
ಕರ್ನಾಟಕದತ್ತ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು

By

Published : Dec 29, 2021, 7:55 PM IST

ಬೆಳಗಾವಿ: ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ಅಣೆಕಟ್ಟಿನ ಗೇಟ್ ದುರಸ್ಥಿ ಮಾಡುವ ಸಂದರ್ಭದಲ್ಲಿ ಅವಗಢ ಸಂಭವಿಸಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ, ಗಡಿಭಾಗದಲ್ಲಿನ ನದಿ ತೀರದ ಜನರಿಗೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಕರ್ನಾಟಕದತ್ತ ಹರಿದು ಬರುತ್ತಿದೆ ಅಪಾರ ಪ್ರಮಾಣದ ನೀರು..

ಮುಂಜಾನೆ ರಾಧಾನಗರಿ ಜಲಾಶಯ ಗೇಟ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿ ರಾಧಾನಗರಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬರುತ್ತಿದೆ. ಜಲಾಶಯದ ಮೂರು ಗೇಟ್ ಮುಖಾಂತರ ಎಂಟು ಟಿಎಂಸಿ ನೀರು ಹರಿದು ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ನೀರು ಸೇರುವುದರಿಂದ ಕೃಷ್ಣಾ ನದಿ ತೀರದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ನಾಳೆ ಮುಂಜಾನೆವರೆಗೂ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್​ಗೆ ಎರಡು ಟಿಎಂಸಿ ನೀರು ಹರಿದು ಬರಬಹುದು ಎಂದು ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ. ಈಗಾಗಲೇ ನದಿಪಾತ್ರದ ಜನರಿಗೆ ಹೈಅಲರ್ಟ್ ಘೋಷಿಸಲಾಗಿದೆ ಎಂದು ಈಟಿವಿ ಭಾರತಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ

ನಿಪ್ಪಾಣಿ ತಾಲೂಕಿನ ಧೂದಗಂಗಾ, ವೇದಗಂಗಾ ಮತ್ತು ಕೃಷ್ಣಾ ಸೇರಿದಂತೆ ನದಿತೀರದ ಜನರಿಗೆ ಹೈಅಲರ್ಟ್ ಘೋಷಿಸಲಾಗಿದೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.

ABOUT THE AUTHOR

...view details