ಕರ್ನಾಟಕ

karnataka

ETV Bharat / city

ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನಿಂದಲೇ ಅತ್ಯಾಚಾರ! - belagavi latest news

ತೋಟಕ್ಕೆ ಕೆಲಸಕ್ಕಿದ್ದವಳ ಪತಿ ಇಲ್ಲದ ಸಂದರ್ಭ ಮಾಲೀಕ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

belagavi rape case
ಬೆಳಗಾವಿ ಅತ್ಯಾಚಾರ ಪ್ರಕರಣ

By

Published : Sep 23, 2021, 11:53 AM IST

Updated : Sep 23, 2021, 7:43 PM IST

ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕ ಅತ್ಯಾಚಾರ ಎಸಗಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಗೋಕಾಕ್​​ನಲ್ಲಿ ನಡೆದಿದೆ. ಸೆಪ್ಟೆಂಬರ್ 17ರ ರಾತ್ರಿ ನಡೆದ ಘಟ‌‌ನೆ ಈಗ ಬೆಳಕಿಗೆ ಬಂದಿದೆ.

ಕಳೆದ ಹಲವು ವರ್ಷಗಳಿಂದ ಸಂತ್ರಸ್ತೆ ಹಾಗೂ ಆಕೆಯ ಪತಿ ಆರೋಪಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಕುಟುಂಬ ಆರೋಪಿ ಮನೆ ಎದುರಿನ ಶೆಡ್‌ನಲ್ಲಿ ವಾಸವಿತ್ತು. ಪತಿ ಹೊರಗೆ ಹೋದಾಗ ಶೆಡ್​ಗೆ ನುಗ್ಗಿದ ಜಮೀನು ಮಾಲೀಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರಕ್ಕೂ ಮುನ್ನ ಸಹಚರನನ್ನು ಶೆಡ್‌ನಲ್ಲಿ ಕಾವಲಿಗಿರಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಈ ವೇಳೆ ತಡೆಯಲು ಬಂದ ಐದು ವರ್ಷ ಮಗನನ್ನು ಆರೋಪಿ ತಳ್ಳಿ ಗಾಯಗೊಳಿಸಿದ್ದಾನೆ. ಅಲ್ಲದೇ ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಶೆಡ್ ಕಾವಲಿಗಿದ್ದ ಆರೋಪಿಯ ಸಹಚರ ಕೂಡ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಹುಲಿಗಳ ತವರಾದ ಚಾಮರಾಜನಗರ: ಗಡಿ ಜಿಲ್ಲೆಯ 3ನೇ ಟೈಗರ್ ರಿಸರ್ವ್ ಶೀಘ್ರ ಘೋಷಣೆ

ಅತ್ಯಾಚಾರ ಎಸಗಿದ ಜಮೀನು ಮಾಲೀಕ, ಆತನ ಸಹಚರನ ವಿರುದ್ಧ ಸಂತ್ರಸ್ತೆ ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಘಟನೆ ಬಳಿಕ ಜಮೀನು ಮಾಲೀಕ ಹಾಗೂ ಸಹಚರ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.

Last Updated : Sep 23, 2021, 7:43 PM IST

ABOUT THE AUTHOR

...view details