ಬೆಳಗಾವಿ :ವಿಧಾನಸಭೆ ಮಾಜಿ ಸ್ಪೀಕರ್, ಹಾಲಿ ಶಾಸಕ ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಎಂದು ಸಚಿವ ಮುನಿರತ್ನ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಅವರಿಗೆ ಹೆಣ್ಣಿನ ಕಷ್ಟ ಗೊತ್ತಿಲ್ಲ. ಅವರು ಸೀರೆ ಉಟ್ಟುಕೊಂಡು ರಸ್ತೆಯಲ್ಲಿ ಹೋಗಲಿ. ಆಗ ಅವರಿಗೆ ಹೆಣ್ಣಿನ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಕಿಡಿ ಕಾರಿದರು.
ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ, ಒಂದು ಹೆಣ್ಣಿಗೆ ಏನು ಅಪಮಾನ ಮಾಡಿದ್ದಾರೋ ಅದು ಅವರಿಗೂ ಅನುಭವ ಆಗಲಿ. ಇಷ್ಟು ಬುದ್ದಿವಂತರಾಗಿ. ಅವರಿಗೆ ಬುದ್ಧಿ ಹೇಳುವ ಶಕ್ತಿ ನಮಗಿಲ್ಲ. ಹೆಣ್ಣನ್ನು ಗೌರವಿಸುವುದನ್ನು ಅವರು ಕಲಿಯಬೇಕು. ಈ ರೀತಿ ಹಗುರವಾಗಿ ಮಾತನಾಡಬಾರದು ಎಂದರು.