ಕರ್ನಾಟಕ

karnataka

ETV Bharat / city

ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೂ ಗೈರಾದ ರಮೇಶ್​ ಕತ್ತಿ - undefined

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗಲೂ ರಮೇಶ್​ ಕತ್ತಿ ಗೈರು, ಕಾರ್ಯಕರ್ತರ ಸಮಾವೇಶಕ್ಕೂ ಗೈರು. ಮತ್ತೆ ಬಂಡಾಯ ಏಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದ ರಮೇಶ್​ ಕತ್ತಿ ನಡೆ.

ರಮೇಶ ಕತ್ತಿ

By

Published : Apr 4, 2019, 12:32 PM IST

Updated : Apr 4, 2019, 1:08 PM IST

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ರಮೇಶ್​ ಕತ್ತಿ ನಿನ್ನೆ ಅಣ್ಣಾಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಸುವಾಗಲೂ ಹಾಗೂ ಕಾರ್ಯಕರ್ತರ ಸಮಾವೇಶಕ್ಕೂ ಗೈರಾಗಿದ್ದರು.

ಅಣ್ಣಾಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಸುವ ವೇಳೆ ಗೈರಾದ ವಿಚಾರದ ಬಗ್ಗೆ ಮಾಧ್ಯಮದವರು ರಮೇಶ್ ಕತ್ತಿ ಅವರನ್ನು ಪ್ರಶ್ನಿಸಿದಾಗ, ಸಂಜೆ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು. ಆದರೆ ಸಂಜೆ ನಡೆದ ಕಾರ್ಯಕರ್ತರ ಸಮಾವೇಶದಲ್ಲೂ ರಮೇಶ್​ ಕತ್ತಿ ಭಾಗಿಯಾಗಿಲ್ಲ. ಇದರಿಂದ ಮತ್ತೆ ರಮೇಶ್​ ಕತ್ತಿ ಬಂಡಾಯ ಏಳುತ್ತಾರಾ ಎಂಬ ಮಾತು ಕೇಳಿಬರುತ್ತಿದೆ.

ಒಂದು ವೇಳೆ ಅಣ್ಣಾಸಾಹೇಬ ಜೊಲ್ಲೆ ಅವರು ಈ ಬಾರಿ ಚಿಕ್ಕೋಡಿ‌ ಲೋಕಸಭಾ ಚುನಾವಣೆಯಿಂದ ಗೆದ್ದರೆ ಮುಂದಿನ‌ ಲೋಕಸಭಾ ಚುನಾವಣೆಗೆ ರಮೇಶ್​ ಕತ್ತಿ ಅವರಿಗೆ ಟಿಕೆಟ್ ಸಿಗದೆ ಇರಬಹುದುದು. ಹೀಗಾಗಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬೆಂಬಲ ನೀಡದೆ ಇರಬಹುದು ಅಥವಾ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್​ ಹುಕ್ಕೇರಿ ಅವರು ಕತ್ತಿ‌ ಕುಟುಂಬಕ್ಕೆ ಸಂಬಂಧಿಕರು. ಇದರಿಂದ ಕತ್ತಿ ಸಹೋದರರು ಪ್ರಕಾಶ್​ ಹುಕ್ಕೇರಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎನ್ನುವ ಮಾತುಗಳು ಈಗಾಗಲೇ ಮತಕ್ಷೇತ್ರದ ತುಂಬಾ ಕೇಳಿ ಬರುತ್ತಿವೆ.

Last Updated : Apr 4, 2019, 1:08 PM IST

For All Latest Updates

TAGGED:

ABOUT THE AUTHOR

...view details