ಬೆಳಗಾವಿ: ಮಾರಾಮಾರಿ ನಡೆಸಿದ ಎರಡೂ ಕುಟುಂಬದವರು ನಮ್ಮ ಸಂಬಂಧಿಕರು. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದೆಂದು ಉಸ್ತುವಾರಿ ರಮೇಶ ಜಾರಕಿಹೊಳಿ ಹೇಳಿದರು.
ಅಂಕಲಗಿ ಗ್ರಾಮದ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಪ್ರಕರಣದ ಪ್ರಮುಖ ಆರೋಪಿ ರಾಜು ತಳವಾರ್, ರಮೇಶ್ ಜಾರಕಿಹೊಳಿ ಆಪ್ತ ಎಂಬ ವಿಚಾರಕ್ಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜು ತಳವಾರ್ ಅಷ್ಟೇ ಅಲ್ಲ. ಇಡೀ ಅಂಕಲಗಿ ಜನ ನನ್ನ ಆಪ್ತರಿದ್ದಾರೆ.
'ಗಲಾಟೆ ಮಾಡಿದ ಎರಡೂ ಕುಟುಂಬಗಳು ನಮ್ಮ ಸಂಬಂಧಿಕರು' ಆಪ್ತರು ಎಂದು ತಪ್ಪು ಮಾಡಿದವರನ್ನು ಸಪೋರ್ಟ್ ಮಾಡಲ್ಲ, ಕ್ರಮ ಕೈಗೊಳ್ಳುತ್ತೇವೆ. ಮಾರಾಮಾರಿ ಆದ ಎರಡು ಕುಟುಂಬದವರು ನಮ್ಮ ಸಂಬಂಧಿಕರು. ಎರಡೂ ಕಡೆಯವರನ್ನೂ ಹಾಗೂ ಪೊಲೀಸರನ್ನು ಕರೆಯಿಸಿ ಯಾರು ತಪ್ಪಿತಸ್ಥರಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತಿಳಿಸುತ್ತೇನೆ ಎಂದರು.
ಯಮಕನಮರಡಿಯಲ್ಲಿ ಗುಂಡಿನ ದಾಳಿಯಾದ ಬಗ್ಗೆ ನನಗೆ ಮಾಹಿತಿ ಇಲ್ಲ. ಎರಡು ಕುಟುಂಬಗಳ ಮಧ್ಯೆ ಗಲಾಟೆಯಾಗಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ನಾನು ಮಂತ್ರಿಯಾಗಿ ಇದರಲ್ಲಿ ಮಧ್ಯ ಪ್ರವೇಶಿಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.