ಕರ್ನಾಟಕ

karnataka

ETV Bharat / city

ಸಿಡಿ ಲೇಡಿ ಕೋರ್ಟ್​ಗೆ ಹಾಜರ್​: ಸಂಕಷ್ಟ ನಿವಾರಣೆಗಾಗಿ ಮಹಾಲಕ್ಷ್ಮಿ ದೇವಾಲಯಕ್ಕೆ ರಮೇಶ್​​​ ದಿಢೀರ್​​​ ಭೇಟಿ - ಸಿಡಿ ಪ್ರಕರಣದ ಯುವತಿ ಕೋರ್ಟ್​ಗೆ ಹಾಜರು

ಸಿಡಿ ಪ್ರಕರಣದಿಂದ ಶುರುವಾಗಿರುವ ಸಂಕಷ್ಟದಿಂದ ದೂರ ಮಾಡುವಂತೆ ಪ್ರಾರ್ಥಿಸಿ, ರಮೇಶ್‌ ಜಾರಕಿಹೊಳಿ ಮಹಾಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ramesh-jarakiholi-sudden-escape-after-cd-lady-present-in-court
ರಮೇಶ್ ಜಾರಕಿಹೊಳಿ

By

Published : Mar 30, 2021, 5:23 PM IST

Updated : Mar 30, 2021, 6:11 PM IST

ಬೆಳಗಾವಿ: ಸಿಡಿ ಲೇಡಿ ಇಂದು ಕೋರ್ಟ್​ಗೆ ಹಾಜರಾದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯದ ಮೊರೆ ಹೋದ ರಮೇಶ್ ಜಾರಕಿಹೊಳಿ

ತಡರಾತ್ರಿ ರಸ್ತೆ ಮಾರ್ಗವಾಗಿ ಗೋಕಾಕಿಗೆ ಬಂದಿದ್ದ ರಮೇಶ್ ಜಾರಕಿಹೊಳಿ‌ ಸಂಜೆವರೆಗೆ ಅಲ್ಲಿಯೇ ಇದ್ದರು. ನಂತರ ಮಾಧ್ಯಮಗಳ ಕಣ್ತಪ್ಪಿಸಿ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಎಲ್ಲಿಗೆ ಹೋದರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:-ಕೊನೆಗೂ ಮೌನ ಮುರಿದ ಸಿಎಂ: ಸಿಡಿ ಪ್ರಕರಣ ಬಗ್ಗೆ ಬಿಎಸ್​ವೈ ಹೇಳಿದ್ದೇನು?

ಸಂಕಷ್ಟದಿಂದ ಪಾರಾಗಲು ದೇವರ ಮೊರೆ

ಸಿಡಿ ಪ್ರಕರಣದಿಂದ ಶುರುವಾಗಿರುವ ಸಂಕಷ್ಟದಿಂದ ದೂರ ಮಾಡುವಂತೆ ಮಹಾಲಕ್ಷ್ಮಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ‌ ಮೊದಲಿನಿಂದಲೂ ಕೊಲ್ಲಾಪುರ ಮಹಾಲಕ್ಷ್ಮಿ ದೇವತೆಯ ಭಕ್ತರು. ಗೋಕಾಕಿನಲ್ಲಿದ್ದರೆ ಅವರು‌ ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇದೆ.

Last Updated : Mar 30, 2021, 6:11 PM IST

ABOUT THE AUTHOR

...view details