ಬೆಳಗಾವಿ :ಯುಗಾದಿ ನಂತರ ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಸುದ್ದಿ ಹರಿದಾಡುತ್ತಿರುವ ಮಧ್ಯೆಯೇ ಸಂಪುಟ ಸೇರಲು ಶಾಸಕ ರಮೇಶ್ ಜಾರಕಿಹೊಳಿ ಕಸರತ್ತು ಆರಂಭಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಅವರು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಿಂದ ಬೆಳಗ್ಗೆ 9.55ರ ಫ್ಲೈಟ್‌ನಲ್ಲಿ ರಮೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಕದ ತಟ್ಟಲು ನಿರ್ಧರಿಸಿದ್ದು, ಸಂಪುಟ ಸೇರಿಸಿಕೊಳ್ಳುವಂತೆ ನಾಯಕರ ಮನವೊಲಿಸುವ ಸಾಧ್ಯತೆ ಇದೆ.