ಕರ್ನಾಟಕ

karnataka

ETV Bharat / city

ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರದಿಂದ ರಾಜಕೀಯ ಪಿತೂರಿ; ರೈತ ಸೇನೆ ಆರೋಪ - ಮಹದಾಯಿ ಯೋಜನಾ ಪ್ರದೇಶದಲ್ಲಿ ಕಾಮಗಾರಿ

ಮಹದಾಯಿ ವಿಚಾರದಲ್ಲಿ ಗೋವಾ ಅನಗತ್ಯವಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾದೀಕರಣದ ಹೇಳಿಕೆಯಿಂದ ಕರ್ನಾಟಕಕ್ಕೆ ಯಾವುದೇ ಹಿನ್ನಡೆ ಆಗೋದಿಲ್ಲ. ಇದೊಂದು ರಾಜಕೀಯ ಪಿತೂರಿ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ್ ಆರೋಪಿಸಿದ್ದಾರೆ.

raith-sena-president-viresh-sobaramath-talk-about-mahadahi-river-issue
ಮಹದಾಯಿ ವಿಚಾರದಲ್ಲಿ ರಾಜಕೀಯ ಪಿತೂರಿ, ರೈತ ಸೇನೆ ಆರೋಪ..

By

Published : Oct 8, 2020, 7:35 PM IST

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಸುಪ್ರೀಂಕೋರ್ಟ್​ಗೆ ತಪ್ಪು ಮಾಹಿತಿ ನೀಡಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮಹದಾಯಿ ವಿಚಾರದಲ್ಲಿ ರಾಜಕೀಯ ಪಿತೂರಿ, ರೈತ ಸೇನೆ ಆರೋಪ..

ಮಹದಾಯಿ ವಿಚಾರದಲ್ಲಿ ಗೋವಾ ಅನಗತ್ಯವಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಧಿಕರಣದ ಹೇಳಿಕೆಯಿಂದ ಕರ್ನಾಟಕಕ್ಕೆ ಯಾವುದೇ ಹಿನ್ನಡೆ ಆಗೋದಿಲ್ಲ. ಇದೊಂದು ರಾಜಕೀಯ ಪಿತೂರಿ ಅಷ್ಟೇ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಮಹದಾಯಿ ಯೋಜನಾ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಿದೆ ಎಂದು ಸುಳ್ಳು ಹೇಳಿದೆ. ಯೋಜನಾ ಪ್ರದೇಶವಾದ ಕಣಕುಂಬಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಹೋಗಲು ಸಾಧ್ಯವಿಲ್ಲ. ಹೀಗಿರುವಾಗ ಕಾಮಗಾರಿ ಹೇಗೆ ಸಾಧ್ಯ..? ಕರ್ನಾಟಕ, ನ್ಯಾಯಾಧಿಕರಣದ ಐತೀರ್ಪಿನಂತೆ ತನ್ನ ಪಾಲಿನ 13.5 ಟಿಎಂಸಿ ನೀರು ಬಳಸಲು ಅನುಮತಿಯಿದೆ. ಗೋವಾದ ದೂರು ರಾಜ್ಯಕ್ಕೆ ಹಿನ್ನಡೆಯಲ್ಲ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ತಿಳಿಸಿದರು.

ABOUT THE AUTHOR

...view details