ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಕೃಷಿಕ ಮಹಿಳೆ ಸಿಡಿಲು ಬಡೆದು ಮೃತಪಟ್ಟಿದ್ದಾರೆ. ವೆಂಕಟಾಪುರ ಗ್ರಾಮದ ಮಲ್ಲಮ್ಮ ವಟವಟಿ(38) ಮೃತ ಮಹಿಳೆ.
ಬೆಳಗಾವಿಯಲ್ಲಿ ಮಳೆ ಅಬ್ಬರ; ಸಿಡಿಲಿಗೆ ಮಹಿಳೆ, ಎರಡು ಎಮ್ಮೆ ಬಲಿ - Women death to thunder
ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಸಿಡಿಲು ಮಳೆಯಾಗುತ್ತಿದ್ದು, ಹಲವಾರು ಹಾನಿಗಳು ಸಂಭವಿಸಿವೆ. ಈಗ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗಿದ್ದು, ಸಿಡಿಲು ಬಡಿದು ಕೃಷಿಕ ಮಹಿಳೆ ಹಾಗೂ ಎರಡು ಎಮ್ಮೆಗಳು ಸಾವನ್ನಪ್ಪಿವೆ.
ಬೆ:ಗಾವಿಯಲ್ಲಿ ಸಿಡಿಲು ಬಡಿದು ಎರಡು ಎಮ್ಮೆ ಸಾವು
ಜಾನುವಾರುಗಳಿಗೆ ಮೇವು ತರುವಾಗ ಸಿಡಿಲು ಬಡಿದು ಮಹಿಳೆ ಮೃತರಾಗಿದ್ದಾರೆ. ಸಿಡಿಲಿಗೆ ಹೊಟ್ಟೆಯ ಭಾಗ ಛಿದ್ರವಾಗಿದೆ. ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಳೆಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ. ಕಳೆದ ವಾರ ಮರ ಬಿದ್ದು ನಗರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಇನ್ನು ಸವದತ್ತಿ ತಾಲೂಕಿನ ಹಿರೇಬದೂನೂರು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆಗಳು ಮೃತಪಟ್ಟಿವೆ.