ಬೆಳಗಾವಿ : ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಹಾಗು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಮಳೆಯಿಂದಾಗಿ ಟೆಂಪೊ,ಕಾರು ಮಧ್ಯೆ ಅಪಘಾತ: ತಪ್ಪಿದ ಅನಾಹುತ - today accident news
ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೊ ಹಾಗು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟೆಂಪೊ, ಕಾರು ಮಧ್ಯೆ ಅಪಘಾತ
ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದ ಕಾರಣ ಕಾರು ಚಾಲಕ ನಿಧಾನದಿಂದ ಚಾಲನೆ ಮಾಡಿದ್ದಾನೆ. ಆದರೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟೆಂಪೊ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಚಲಿಸಿದೆ. ನಂತರ ಕಾರಿನ ಒಂದು ಭಾಗಕ್ಕೆ ಗುದ್ದಿದ್ದು, ಸುದೈವವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.