ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುರೇಶ್ ಅಂಗಡಿ ಅವರು ಈ ಬಾರಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂಗಡಿ ಹಠಾವೊ ಎಂದವರು ಅದೇ ಅಂಗಡಿಯೊಳಗೆ ಬರಬೇಕು... ನಾಲ್ಕನೇ ಬಾರಿಗೆ ಟಿಕೆಟ್ ಸಿಕ್ಕ ಖುಷಿಯಲ್ಲಿ ಸುರೇಶ್ ಅಂಗಡಿ - undefined
ವಿರೋಧಿಗಳೂ ನನಗೆ ಮತ ಹಾಕುವುದರಿಂದ ನಾಲ್ಕನೇ ಬಾರಿಯೂ ಗೆಲುವು ನನ್ನದೆ ಎಂದು ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪ್ರತಿಕ್ರಿಯೆ
ಚುನಾವಣೆ ಸಿದ್ಧತೆ ಕುರಿತು ಮಾತನಾಡಿದ ಅವರು, ತೀವ್ರ ವಿರೋಧದ ಮಧ್ಯೆಯೂ ನನಗೆ ಟಿಕೆಟ್ ಸಿಕ್ಕಿದ್ದು ಸಂತೋಷವಾಗಿದೆ. ವಿರೋಧಿಗಳು ನನಗೆ ಮತ ಹಾಕ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪ್ರತಿಕ್ರಿಯೆ