ಕರ್ನಾಟಕ

karnataka

ETV Bharat / city

ಬೆಳಗಾವಿ: ಅಪ್ಪು ಅಗಲಿಕೆಯಿಂದ ಬಾರದೂರಿಗೆ ಸೇರಿದ ಇಬ್ಬರು ಅಭಿಮಾನಿಗಳು - ಪುನೀತ್ ಅಭಿಮಾನಿ ಹೃದಯಾಘಾತದಿಂದ ಮೃತ

ಪುನೀತ್ ರಾಜ್ ಕುಮಾರ್ ನಿಧನದಿಂದ ಮನನೊಂದ ಅಭಿಮಾನಿ ರಾಹುಲ್ ಗಾಡಿವಡ್ಡರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೋರ್ವ ಅಭಿಮಾನಿ ಪರಶುರಾಮ ಹನುಮಂತ ದೇಮಣ್ಣವರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Puneet Raj Kumar fan committed suicide at athani
ಪುನೀತ್ ರಾಜ್ ಕುಮಾರ್ ಅಭಿಮಾನಿ ಆತ್ಮಹತ್ಯೆ

By

Published : Oct 30, 2021, 8:22 AM IST

Updated : Oct 30, 2021, 9:23 AM IST

ಅಥಣಿ: ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣದಿಂದ ಅಭಿಮಾನಿಗಳ ಬಳಗಕ್ಕೆ ಬರಸಿಡಿಲು ಬಡಿದಂತಾಗಿದೆ. ಅಥಣಿಯಲ್ಲಿ ಮನನೊಂದ ಓರ್ವ ಅಭಿಮಾನಿ ನೇಣಿಗೆ ಶರಣಾಗಿದ್ದಾರೆ. ಬೆಳಗಾವಿಯ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿಮಾನಿ ಆತ್ಮಹತ್ಯೆ

ಪುನೀತ್ ರಾಜ್ ಕುಮಾರ್ ನಿಧನದಿಂದ ಮನನೊಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರಾಹುಲ್ ಗಾಡಿವಡ್ಡರ (22) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ನಟ ಪುನೀತ್​ ರಾಜ್​ಕುಮಾರ್​ ಫ್ಲೆಕ್ಸ್​ ವಿರೂಪಗೊಳಿಸಿದ ಕಿಡಿಗೇಡಿಗಳು.. ಪುಂಡರನ್ನು ಬಂಧಿಸುವಂತೆ ಆಗ್ರಹಿಸಿದ ಅಪ್ಪು ಅಭಿಮಾನಿಗಳು

ಪುನಿತ್ ರಾಜ್​​ಕುಮಾರ ಭಾವಚಿತ್ರಕ್ಕೆ ಮನೆಯಲ್ಲಿ ಪೂಜೆ ಸಲ್ಲಿಸಿ, ಅವರ ಫೋಟೋ ಮುಂದೆ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

ಪುನೀತ್ ಅಭಿಮಾನಿ ಹೃದಯಾಘಾತದಿಂದ ಮೃತ:

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತರಾಗಿದ್ದಾರೆ. ಬೆಳಗಾವಿ ತಾಲೂಕಿನ ಶಿಂಧೊಳಿ ಗ್ರಾಮದ ಕನಕದಾಸ ನಗರದ ಪರಶುರಾಮ ಹನುಮಂತ ದೇಮಣ್ಣವರ(33) ಎಂಬಾತ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.

ಪುನೀತ್ ರಾಜ್​ಕುಮಾರ್​ ಹಾಗೂ ಶಿವರಾಜ್​ಕುಮಾರ್​ ಅವರ ಫ್ಯಾನ್ ಆಗಿದ್ದ ಪರುಶರಾಮ ಇಬ್ಬರ ಚಿತ್ರ ಬಿಡುಗಡೆ ಆದಾಗ ಮೊದಲ ಶೋಗೆ ಹೋಗುತ್ತಿದ್ದರು. ಕೆಲಸ ಮುಗಿಸಿಕೊಂಡು ಶುಕ್ರವಾರ ಸಂಜೆ ಮನೆಗೆ ಬಂದಿದ್ದ ಇವರು ಟಿವಿ ಎದುರು ಕುಳಿತು ಅಪ್ಪುವಿನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Last Updated : Oct 30, 2021, 9:23 AM IST

ABOUT THE AUTHOR

...view details