ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆ ವೈಷಮ್ಯ ಹಿನ್ನೆಲೆ ಮೃತ ವೃದ್ಧನ ಅಂತ್ಯಕ್ರಿಯೆಗೆ ಸವರ್ಣೀಯರು ಅವಕಾಶ ನೀಡಿಲ್ಲ. ಈ ಹಿನ್ನೆಲೆ ವೃದ್ಧನ ಶವದ ಮುಂದೆ ಪರಿಶಿಷ್ಟ ಸಮುದಾಯದವರು ಪ್ರತಿಭಟನೆ ನಡೆಸಿದ ಘಟನೆ ಕೆ.ಕೆ.ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಪಂ ಚುನಾವಣೆ ವೈಷಮ್ಯ: ಮೃತನ ಶವದ ಮುಂದೆಯೇ ಪ್ರತಿಭಟನೆ - gram panchayath election
ಕೆ.ಕೆ.ಕೊಪ್ಪ ಗ್ರಾಮದಲ್ಲಿ ಮೃತ ವೃದ್ಧನ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡದ ಹಿನ್ನೆಲೆ ಶವದ ಮುಂದೆ ಪರಿಶಿಷ್ಟ ಸಮುದಾಯದವರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೆ.ಕೆ.ಕೊಪ್ಪ ಗ್ರಾಮದ ಚಂದ್ರಪ್ಪ ತಳವಾರ (60) ಸಾವನ್ನಪ್ಪಿದ್ದರು. ಮೃತ ವೃದ್ಧನ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಅಲ್ಲಿನ ಖಾಸಗಿ ಜಮೀನಿನ ಮಾಲೀಕರು ಚುನಾವಣೆ ವೈಷಮ್ಯ ಹಿನ್ನೆಲೆ ಅವಕಾಶ ನೀಡಿಲ್ಲ. ಇದಕ್ಕೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸವರ್ಣೀಯರ ವಿರುದ್ಧ ಎಸ್ಟಿ ಸಮುದಾಯ ಮಹಿಳೆಯೊಬ್ಬರು ಸ್ಪರ್ಧೆ ಮಾಡಿರುವುದು ಕಾರಣ ಎನ್ನಲಾಗಿದೆ. ಈ ಹಿನ್ನೆಲೆ ಅಂತ್ಯಕ್ರಿಯೆಗೆ ಅನುಮತಿ ನೀಡುತ್ತಿಲ್ಲ ಎಂದು ಪರಿಶಿಷ್ಟ ಸಮುದಾಯದವರು ಆರೋಪಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರ ಮನವೊಲಿಸಿ ಬೇರೊಂದು ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.