ಬೆಳಗಾವಿ:ಕೊರೊನಾದಿಂದ ಸಂಕಷ್ಟಕ್ಕೀಡಾದ ನೇಕಾರ ಕುಟುಂಬಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ನೊಂದಿಗೆ, ಮಗ್ಗಗಳ ಅಭಿವೃದ್ಧಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಡಿಸಿ ಕಚೇರಿ ಎದುರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಕಾಂಗ್ರೆಸ್ ಮುಖಂಡರು, ನಿತ್ಯದ ದುಡಿಮೆ ಮೇಲೆ ಅವಲಂಬಿತವಾಗಿರೋ ನೇಕಾರರು ಕೊರೊನಾ ಹೊಡೆತಕ್ಕೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಲ್ಲದೇ ಸವಿತಾ ಸಮಾಜದವರು, ಕುಂಬಾರಿಕೆ, ಮಡಿವಾಳರು, ಕಮ್ಮಾರರು, ಚಮ್ಮಾರ ಸಮುದಾಯದವರಿಗೆ 50 ಸಾವಿರಾರ ಕೋಟಿ ರೂ. ವಿಶೇಷ ಪ್ಯಾಕೆಜ್ ಘೋಷಿಸಿಸುವಂತೆ ಆಗ್ರಹಿಸಿದರು.
ಬಿಎಸ್ವೈ ಸರ್ಕಾರ ಕೇವಲ 1, 610 ಕೋಟಿ ರೂ. ಪ್ಯಾಕೆಜ್ ಬಿಡುಗಡೆ ಮಾಡಿ ಜನತೆಗೆ ಮೊಸ ಮಾಡಿದೆ. ಇದು ಬಕಾಸುರ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆಯಂತಾಗಿದ್ದು, ಅಸಂಘಟಿತ ಕ್ಷೇತ್ರದ ಸಮುದಾಯಗಳ ನೆರವಿಗೆ ಸರ್ಕಾರ ಧಾವಿಸುವ ಮೂಲಕ ಅವರಿಗೆ 10 ಸಾವಿರ ರೂ.ಗಳ ಪರಿಹಾರ ನೀಡಬೇಕೆಂದರು.
ಇದಲ್ಲದೇ ರೈತರ ಬೆಳೆಗೆ ಯೋಗ್ಯ ಬೆಲೆ ಒದಗಿಸಲು 500 ಕೋಟಿ ರೂ. ಮೊತ್ತದ ಆವರ್ತ ನಿಧಿ ಸ್ಥಾಪಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಕೊರೊನಾದಿಂದ ಕೈಸಾಲ, ಬ್ಯಾಂಕ್ ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಮೂವರು ನೇಕಾರರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.